ಕೊಡ್ಲಿಪೇಟೆ, ಅ. ೨೮: ಇಲ್ಲಿನ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಸಂತೆ ಮೇಳ ಆಯೋಜಿಸಲಾಗಿತ್ತು.

ಕೊಡ್ಲಿಪೇಟೆ ಸಂತೆ ಮಾರುಕಟ್ಟೆಯಲ್ಲಿ ನಡೆದ ಮೇಳದಲ್ಲಿ ಕೊಡ್ಲಿಪೇಟೆ ಮತ್ತು ಬ್ಯಾಡಗೊಟ್ಟ ಪಂಚಾಯಿತಿ ವ್ಯಾಪ್ತಿಯ ಒಕ್ಕೂಟದ ಪ್ರತಿನಿಧಿಗಳು ತರಕಾರಿ ಸೇರಿದಂತೆ ಇನ್ನಿತರ ದಿನೋಪಯೋಗಿ ಪದಾರ್ಥಗಳನ್ನು ಸಂತೆಯಲ್ಲಿಟ್ಟು ವ್ಯಾಪಾರ ಮಾಡಿದರು. ಸಂತೆಮೇಳವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೂವಯ್ಯ ಉದ್ಬಾಟಿಸಿದರು.

ಒಕ್ಕೂಟದ ಮೇಲ್ವಿಚಾರಕಿ ಪದ್ಮಶ್ರೀ,ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಲಾವಣ್ಯ ಪ್ರಕಾಶ್, ಅಶ್ವಿನಿ ಮಂಜುನಾಥ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್, ಒಕ್ಕೂಟದ ಕೊಡ್ಲಿಪೇಟೆ ಅಧ್ಯಕ್ಷೆ ವೇದಾವತಿ, ಬ್ಯಾಡಗೊಟ್ಟ ಅಧ್ಯಕ್ಷೆ ಸರೋಜಮ್ಮ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.