ಕುಶಾಲನಗರ, ಅ. ೨೭: ಶ್ರೀ ಕೋಣ ಮಾರಿಯಮ್ಮ ದೇವಾಲಯದ ೨೦ನೇ ವರ್ಷದ ವಾರ್ಷಿಕ ಪೂಜೆಗೆ ಬುಧವಾರದಿಂದ ಚಾಲನೆ ದೊರೆತಿದೆ. ಕುಶಾಲನಗರ ತಾಲೂಕು ಮುಳ್ಳುಸೋಗೆ ೪ನೇ ವಿಭಾಗದಲ್ಲಿ ಇರುವ ಐತಿಹಾಸಿಕ ದೇವಾಲಯದಲ್ಲಿ ಸಂಪ್ರದಾಯದAತೆ ಕಾವೇರಿ ನದಿಯಿಂದ ಮೆರವಣಿಗೆ ಮೂಲಕ ಕಳಶಗಳಲ್ಲಿ ದೀಪ ತಂದು ನಂತರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಗುರುವಾರ ಕುಶಾಲನಗರ ದೇವಾಲಯ ಒಕ್ಕೂಟ ವತಿಯಿಂದ ಫಲತಾಂಬೂಲ ಅರ್ಪಣೆಯೊಂದಿಗೆ ಪೂಜಾಕಾರ್ಯಕ್ರಮ ನಂತರ ಸಂಜೆ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.

ದೇವಾಲಯ ಸೇವಾ ಟ್ರಸ್ಟ್ನ ಅಧ್ಯಕ್ಷ ಎಸ್.ಜೆ ಸತೀಶ್, ಉಪಾಧ್ಯಕ್ಷ ಇ. ರಾಜು, ಕಾರ್ಯದರ್ಶಿ ಕುಮಾರ್, ಖಜಾಂಚಿ ಹೆಚ್.ಜೆ. ಲೋಕೇಶ್ ಪ್ರಮುಖರಾದ ಆರ್. ಸುರೇಶ್, ಜಯವರ್ಧನ್, ಎಂ.ಎಸ್. ಶಿವಾನಂದ್, ಚೆಲುವರಾಜ್, ದುಷ್ಯಂತ್, ಮಂಜುನಾಥ್, ಎಂ.ಬಿ. ಸುರೇಶ್, ಧನರಾಜ್ ಮತ್ತಿತರರು ಇದ್ದರು.

ತಾ. ೨೮ ರಂದು (ಇಂದು) ಮಧ್ಯಾಹ್ನ ಮಹಾ ಮಂಗಳಾರತಿ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಜರುಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವೀರಗಾಸೆ, ಡೊಳ್ಳು ಕುಣಿತ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವಿ ಮೆರವಣಿಗೆ ನಡೆಯಲಿದೆ.