ಸಿದ್ದಾಪುರ, ಅ. ೨೭: ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಗೆ ಚುನಾವಣೆ ರಂಗೇರಿದೆ. ೧೭ ಸ್ಥಾನಗಳಿಗೆ ೪೯ ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ೧ಚೆನ್ನಯ್ಯನಕೋಟೆ ೧ ಮತ್ತು ೨ ತಣ್ಣೀರಹಳ್ಳ ೩, ಕೋಟೆ ಪೈಸಾರಿ ೪, ಗುಡ್ಲೂರು ೫, ಚೆನ್ನಂಗಿ ೬ ವಾರ್ಡ್ಗಳಿವೆ. ಎರಡು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿ ಹದಿನೇಳು ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಮತ್ತೊಂದು ಪಕ್ಷ ಹನ್ನೊಂದು ಮಂದಿಯನ್ನು ಕಣಕ್ಕಿಳಿಸಿದೆ. ಇದರೊಂದಿಗೆ ೪ ಮಂದಿ ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದಾರೆ.
ತಾ. ೨೮ ರಂದು ಬೆಳಗ್ಗೆ ೭ ಗಂಟೆಯಿAದ ಸಂಜೆ ೫ ರವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅ. ೩೧ ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ಅಧಿಕಾರಿಯಾಗಿ ರಾಜೇಶ್, ಸಹಾಯಕ ಚುನಾವಣಾಧಿಕಾರಿಯಾಗಿ ಕೀರ್ತಿ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ.