ಕುಶಾಲನಗರ, ಅ. ೨೭: ಬಾಳುಗೋಡು-ರಸೂಲ್‌ಪುರ ವ್ಯಾಪ್ತಿಯಲ್ಲಿ ಕಾವೇರಿ ನದಿ ಬದಿಯಿಂದ ಅರಣ್ಯದ ಕಡೆಗೆ ತೆರಳುತ್ತಿದ್ದ ಜಿಂಕೆಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ, ಜಿಂಕೆ ಗಾಯಗೊಂಡು ಮೃತಪಟ್ಟ ಘಟನೆ ಸಂಭವಿಸಿದೆ.

ಅಪಘಾತದಿAದ ದ್ವಿಚಕ್ರ ವಾಹನದಲ್ಲಿ ದುಬಾರೆಯತ್ತ ತೆರಳುತ್ತಿದ್ದ ಇಬ್ಬರು ಟಿಬೇಟ್ ಮಹಿಳೆಯರಿಗೆ ಕೂಡ ಗಂಭೀರ ಪೆಟ್ಟಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ಅಂದಾಜು ೧೦ ವರ್ಷ ಪ್ರಾಯದ ಗಂಡು ಜಿಂಕೆ ಅನತಿ ದೂರದಲ್ಲಿ ಬಿದ್ದು ಸಾವನ್ನಪ್ಪಿದ ದೃಶ್ಯ ಗೋಚರಿಸಿದೆ. ಸಮೀಪದ ಹೋಂ ಸ್ಟೇ ಆವರಣದಲ್ಲಿ ದುರ್ವಾಸನೆ ಬಂದ ಹಿನ್ನೆಲೆ ಪರಿಶೀಲಿಸಿದಾಗ ಜಿಂಕೆ ಮೃತದೇಹ ಪತ್ತೆಯಾಗಿದೆ. ಅಪಘಾತದ ದೃಶ್ಯ ಹೋಂ ಸ್ಟೇ ಸಿಸಿ ಕ್ಯಾಮರದಲ್ಲಿ ದಾಖಲಾಗಿದ್ದು, ಡಿಕ್ಕಿಯ ರಭಸಕ್ಕೆ ಜಿಂಕೆ ರಸ್ತೆಯಲ್ಲಿ ಉರುಳಿ ಬಿದ್ದಿದ್ದು ಕಂಡು ಬಂದಿದೆ.

ಜಿAಕೆಯ ಮುಖ, ತೊಡೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮೃತ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಅಪಘಾತಕ್ಕೆ ಕಾರಣರಾದವರನ್ನು ಪತ್ತೆಹಚ್ಚಿ ಕಾನೂನಿನ್ವಯ ಮೊಕದ್ದಮೆ ದಾಖಲಿಸಲಾಗುವುದೆಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್ ತಿಳಿಸಿದ್ದಾರೆ.