ಮಡಿಕೇರಿ, ಅ. ೨೭: ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯದ ೨೪ನೇ ವಾರ್ಷಿಕೋತ್ಸವ ತಾ. ೨೮ ರಂದು (ಇಂದು) ನಡೆಯಲಿದೆ. ಆ ಪ್ರಯುಕ್ತ ತಾ. ೨೭ರ ರಾತ್ರಿ ನಗರದ ವಿವಿಧ ಬಡಾವಣೆಗಳಿಂದ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಅಡುಗೆ ತಯಾರಿಕೆಯ ಪೂರ್ವಭಾವಿ ಕೆಲಸದಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಂಡರು.