ಕಠಿಣ ನಿರ್ಧಾರದಿಂದ ಆದ ತಪ್ಪುಗಳನ್ನು ಸರಿಪಡಿಸಬೇಕಾಗಿದೆ - ರಿಷಿ ಸುನಕ್

ಲಂಡನ್, ಅ. ೨೫: ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದು ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ತಮ್ಮ ಮೊದಲ ಭಾಷಣದಲ್ಲಿ ಹೇಳಿದ್ದಾರೆ. ರಿಷಿ ಸುನಕ್ ಅವರು ಬಕಿಂಗ್ರಾö್ಯಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾದರು. ಬಳಿಕ ಬ್ರಿಟನ್ ಪ್ರಧಾನಿಯಾಗಿ ಔಪಚಾರಿಕವಾಗಿ ಪ್ರಮಾಣವಚನ ಸ್ವೀಕರಿಸಿದರು. ಬ್ರಿಟನ್‌ನ ಪ್ರಧಾನಿಯಾಗಿ ನೇಮಕಗೊಂಡ ನಂತರ ತಮ್ಮ ಮೊದಲ ಭಾಷಣದಲ್ಲಿ ರಿಷಿ ಸುನಕ್, ದೇಶವು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಈ ಕ್ಷಣದಿಂದಲೇ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು. ಪ್ರಸ್ತುತ ನಮ್ಮ ದೇಶವು ಆಳವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಉಕ್ರೇನ್‌ನಲ್ಲಿನ ಪುಟಿನ್ ಯುದ್ಧವು ಪ್ರಪಂಚದಾದ್ಯAತದ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಿದೆ. ಮಾಜಿ ಪ್ರಧಾನಿ ಲಿಜ್ ಟ್ರಸ್ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವ ಸಲುವಾಗಿ ಕೆಲ ಕಠಿಣ ನಿರ್ಣಯಗಳನ್ನು ಕೈಗೊಂಡರು. ನಾನು ಅವರನ್ನು ಮೆಚ್ಚುತ್ತೇನೆ. ಆದರೆ ಉದ್ದೇಶಪೂರ್ವಕವಲ್ಲದ ಕೆಲವು ತಪ್ಪುಗಳು ಆಗಿವೆ. ವಾಸ್ತವವಾಗಿ ಆ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದರು. ಇದಕ್ಕೂ ಮುನ್ನ ಬ್ರಿಟನ್‌ನ ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ ಅವರು ಡೌನಿಂಗ್ ಸ್ಟಿçÃಟ್‌ನಿಂದ ವಿದಾಯ ಭಾಷಣ ಮಾಡಿದರು. ನೂತನ ಪ್ರಧಾನಿಯ ಯಶಸ್ಸಿಗೆ ಹಾರೈಸಿದರು. ಅದೇ ಸಮಯದಲ್ಲಿ, ಅವರು ಅಧಿಕಾರದಲ್ಲಿದ್ದ ಸಮಯದಲ್ಲಿನ ಕೆಲವು ಸಾಧನೆಗಳ ಬಗ್ಗೆ ತಿಳಿಸಿದರು.

ಇಂದು ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ

ನವದೆಹಲಿ, ಅ. ೨೫: ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಾ. ೨೬ ರಂದು (ಇಂದು) ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ಹಸ್ತಾಂತರಿಸಲಿರುವ ಸಮಾರಂಭಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಭರದ ಸಿದ್ಧತೆಗಳು ನಡೆದಿವೆ. ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತಿç ಅವರು ಔಪಚಾರಿಕವಾಗಿ ಚುನಾವಣಾ ಪ್ರಮಾಣಪತ್ರವನ್ನು ಖರ್ಗೆ ಅವರಿಗೆ ಹಸ್ತಾಂತರಿಸಲಿದ್ದು, ನಂತರ ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಖರ್ಗೆ ಅವರಿಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಓಮಿಕ್ರಾನ್ ರೂಪಾಂತರಿ ಆತಂಕ: ನಿಯಮ ಪಾಲಿಸಲು ಕರೆ

ಬೆಂಗಳೂರು, ಅ. ೨೫: ಭಾರತದ ವಿವಿಧ ಭಾಗಗಳಲ್ಲಿ ಓಮಿಕ್ರಾನ್ ಬಿಎಫ್ ೭ ಉಪ-ವೇರಿಯಂಟ್ ಪತ್ತೆಯಾದ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಕೋವಿಡ್ -೧೯ ಮಾರ್ಗಸೂಚಿಯನ್ನು ಶ್ರದ್ಧೆಯಿಂದ ಅನುಸರಿಸಬೇಕು ಎಂದು ತಜ್ಞರು ಕರೆ ನೀಡಿದ್ದಾರೆ. ಓಮಿಕ್ರಾನ್ ಸ್ಪಾನ್' ಎಂದು ಕರೆಯಲ್ಪಡುವ ಃಈ.೭ ಉಪ ತಳಿ ಹೆಚ್ಚಿನ ಪ್ರಸರಣವನ್ನು ಹೊಂದಿದೆ ಮತ್ತು ಲಸಿಕೆ ಪ್ರತಿರಕ್ಷೆಯನ್ನು ಮೀರಿ ಹೋಗುವ ಸಾಧ್ಯತೆ ಇದೆ ಎಂದು ಕೇರ್ ಹಾಸ್ಪಿಟಲ್ಸ್ ಗ್ರೂಪ್‌ನ ಆಂತರಿಕ ವೈದ್ಯಕೀಯ ಸಲಹೆಗಾರ ನವೋದಯ ಗಿಲ್ಲಾ ಅವರು ಎಚ್ಚರಿಸಿದ್ದಾರೆ. ಈ ಹೊಸ ರೂಪಾಂತರಿ ಹಿಂದಿನ ರೂಪಾಂತರದೊAದಿಗೆ ನೈಸರ್ಗಿಕ ಸೋಂಕಿನ ಮೂಲಕ ಅಥವಾ ಲಸಿಕೆಗಳ ಸಂಪೂರ್ಣ ಕೋರ್ಸ್ ತೆಗೆದುಕೊಂಡರೂ ಸಹ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಲಕ್ಷಣಗಳು ಸಾಮಾನ್ಯ ಜ್ವರಕ್ಕೆ ಹೋಲುತ್ತವೆ ಮತ್ತು ಶೀತ, ಕೆಮ್ಮು, ಜ್ವರ, ದೇಹದ ನೋವು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇದು ಹೆಚ್ಚು ಹರಡುವ ಕಾರಣ ಕಡಿಮೆ ಅವಧಿಯೊಳಗೆ ದೊಡ್ಡ ಗುಂಪಿನ ಜನರಿಗೆ ಹರಡುತ್ತದೆ. ಹೀಗಾಗಿ ಜನ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

ಹರಿಯಾಣದಲ್ಲಿ ಅಖಿಲ ಭಾರತ ಗೃಹ ಸಚಿವರ ಸಮ್ಮೇಳನ

ಬೆಂಗಳೂರು, ಅ. ೨೫: ಹರಿಯಾಣದಲ್ಲಿ ಇದೇ ತಿಂಗಳ ೨೭-೨೮ರಂದು ಅಖಿಲ ಭಾರತ ಗೃಹ ಸಚಿವರ ಸಮ್ಮೇಳನ ನಡೆಯಲಿದ್ದು, ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ಕುರಿತಂತೆ ಗಂಭೀರ ಚರ್ಚೆ ನಡೆಯಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಆಂತರಿಕ ಭದ್ರತೆ, ಸೈಬರ್ ಅಪರಾಧಗಳು ಮತ್ತು ನಿಯಂತ್ರಣ, ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಹಾಗೂ ಇನ್ನಿತರ ವಿಷಯಗಳ ಬಗ್ಗೆ ವಿಶೇಷ ಚರ್ಚೆ ನಡೆಯಲಿದ್ದು, ರಾಜ್ಯದಲ್ಲಿ ಅಪರಾಧಗಳನ್ನು ಪತ್ತೆ ಹಚ್ಚಲು ಕೈಗೊಂಡಿರುವ ವೈಜ್ಞಾನಿಕ ಕ್ರಮಗಳು, ತನಿಖೆ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಬಗ್ಗೆ ಸಮ್ಮೇಳನದಲ್ಲಿ ರಾಜ್ಯದಿಂದ ವಿಷಯ ಮಂಡನೆ ಮಾಡಲಾಗುವುದು ಎಂದು ಅವರು ಹೇಳಿಕೆಯಲ್ಲಿ ಮಾಹಿತಿ ನೀಡದ್ದಾರೆ. ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರೂ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದು, ರಾಜ್ಯ ಪೊಲೀಸ್ ಮುಖ್ಯಸ್ಥ ಶ್ರೀ ಪ್ರವೀಣ್ ಸೂದ್ ಅವರು, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ, ಅಪರಾಧ ಚಟುವಟಿಕೆಗಳ ನಿಯಂತ್ರಣ, ಅಪರಾಧ ಪತ್ತೆ, ಸೈಬರ್ ಕ್ರೈಂ ಮುಂತಾದ ವಿಷಯಗಳ ಬಗ್ಗೆ ತೆಗೆದುಕೊಂಡ ಕ್ರಮಗಳನ್ನು, ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧಿಗಳು ಕಾನೂನಿನ ಕುಣಿಕೆಯಿಂದ ನುಣುಚಿಕೊಳ್ಳದಂತೆ ಕ್ರಮ ಕೈಗೊಳ್ಳುವುದೂ ಸೇರಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ವಿಶೇಷ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಾರು ಸ್ಫೋಟ ಪ್ರಕರಣ - ಎನ್.ಐ.ಎ.ಗೆ ವರ್ಗಾಹಿಸಲು ಒತ್ತಾಯ

ಕೊಯಮತ್ತೊರು, ಅ. ೨೫: ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟ ಆತ್ಮಾಹುತಿಗಳ ದಾಳಿ ಎಂಬುದನ್ನು ರಾಜ್ಯ ಪೊಲೀಸರು ಒಪ್ಪಿಕೊಳ್ಳಬೇಕೆಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಮಂಗಳವಾರ ಹೇಳಿದ್ದಾರೆ. ಈ ಪ್ರಕರಣವನ್ನು ರಾಷ್ಟಿçÃಯ ತನಿಖಾ ದಳಕ್ಕೆ ವರ್ಗಾಯಿಸುವಂತೆ ಕೋರಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದೀಪಾವಳಿಗೂ ಒಂದು ದಿನ ಮುಂಚಿತವಾಗಿ ಕೊಯಮತ್ತೂರಿಲ್ಲಿ ಕಾರು ಸ್ಫೋಟ ಸಂಭವಿಸಿದೆ. ಎನ್‌ಐಎ ದಾಳಿ ಮತ್ತು ಬಂಧನದಿAದ ಕೊಯಮತ್ತೂರು ಉಗ್ರರ ಚಟುವಟಿಕೆ ತಾಣ ಎಂಬುದು ತಿಳಿದುಬಂದಿದೆ. ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯ ಮನೆಯಿಂದ ೫೦ ಕೆಜಿ ಅಮೋನಿಯಂ ನೈಟ್ರೈಟ್, ಪೊಟಾಶಿಯಂ, ಸೊಡಿಯಂ, ಪ್ಯೂಸ್ ವೈರ್, ಏಳು- ವೋಲ್ಟ್ ಬ್ಯಾಟರಿಯನ್ನು ಪೊಲೀಸರು ವಸಕ್ಕೆ ಪಡೆದಿದ್ದಾರೆ. ಆದರೆ, ಈವರೆಗೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂದರು. ಕೊಯಮತ್ತೂರಿನ ಪ್ರಸಿದ್ಧ ಸಂಗಮೇಶ್ವರ ದೇವಾಲಯದ ಬಳಿ ಭಾನುವಾರ ಬೆಳಗ್ಗೆ ಕಾರು ಸ್ಫೋಟ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟ ನಂತರ ಐವರನ್ನು ನಗರ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಕೆಲಕಾಲ ಸ್ತಬ್ಧಗೊಂಡ ವಾಟ್ಸಪ್

ಮಡಿಕೇರಿ, ಅ. ೨೫: ಪ್ರಮುಖ ಸಂಪರ್ಕ ಮಾಧ್ಯಮವಾಗಿ ಬಳಕೆಯಾಗುತ್ತಿರುವ ವಾಟ್ಸಪ್ ಮಂಗಳವಾರ ಸುಮಾರು ೨ ಗಂಟೆ ಕಾಲ ಸ್ತಬ್ಧವಾಗಿಬಿಟ್ಟಿತ್ತು. ಸಂದೇಶಗಳನ್ನು ಕಳುಹಿಸಲೂ ಆಗದೆ, ಸ್ವೀಕರಿಸಲೂ ಆಗದೆ ಬಳಕೆದಾರರು ಪರದಾಡಿದರು. ವಾಟ್ಸಪ್‌ನ ಈ ತಾಂತ್ರಿಕ ಅಡಚಣೆ ಮತ್ತೊಂದು ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಾಕಷ್ಟು ಸದ್ದುಮಾಡಿತು. ಮಂಗಳವಾರ ಮಧ್ಯಾಹ್ನ ಸುಮಾರು ೧೨ ಗಂಟೆಯ ಸಮಯ. ವಾಟ್ಸಪ್‌ನಲ್ಲಿ ಕಳುಹಿಸಿದ ಸಂದೇಶಗಳು, ಫೋಟೋಗಳನ್ನು ಅತ್ತ ಕಡೆಯವರು ನೋಡುತ್ತಲೇ ಇಲ್ಲ. ಬೇರೆಯವರಿಂದ ಯಾವುದೇ ಸಂದೇಶ, ಫೋಟೋಗಳೂ ಬರುತ್ತಿಲ್ಲ. ಕಂಪ್ಯೂಟರ್‌ಗಳಲ್ಲಿ ವಾಟ್ಸಪ್ ವೆಬ್ ಕೂಡ ಕೆಲಸ ಮಾಡುತ್ತಿಲ್ಲ. ಇಡೀ ಜಗತ್ತಿನಲ್ಲೇ ವಾಟ್ಸಪ್ ಸ್ತಬ್ಧವಾಗಿಬಿಟ್ಟಿತ್ತು. ಮಧ್ಯಾಹ್ನ ೧೨.೦೭ಕ್ಕೆ ಭಾರತದಲ್ಲಿ ಮೊದಲು ಈ ಸಮಸ್ಯೆ ವರದಿಯಾಯಿತು. ೧ ಗಂಟೆಯ ಸಮಯಕ್ಕೆ ಬೇರೆ ದೇಶಗಳಿಂದಲೂ ‘ವಾಟ್ಸಪ್ ಸ್ತಬ್ಧ’ ವರದಿಗಳು ಬಂದವು. ಸರ್ವರ್‌ನಲ್ಲಿ ತೊಂದರೆಯಿAದ ಈ ಸಮಸ್ಯೆ ಆಗಿದೆ ಎಂದು ಮೂಲಗಳು ತಿಳಿಸಿವೆ. ಕೊನೆಗೆ ೨.೨೦ಕ್ಕೆ ವಾಟ್ಸಪ್ ಸಹಜ ಸ್ಥಿತಿಗೆ ಮರಳಿತು.