ಕುಶಾಲನಗರ, ಅ. ೨೫: ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಬೈಲಕುಪ್ಪೆಯ ಬೌದ್ಧ ಮಂದಿರಗಳಿಗೆ ಭೇಟಿ ನೀಡಿದರು.

ಮಠದ ಆಡಳಿತ ಮಂಡಳಿ ಸದಸ್ಯರು ಮುಖ್ಯಮಂತ್ರಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಅರುಣಾಚಲದಿಂದ ನಾಮ್ಡೊçÃಲಿಂಗ್ ಮಠದ ಸನ್ಯಾಸಿಗಳನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದರು.

ಶಿಬಿರದ ಸೆರಾ ಜೇ ಸೆಕೆಂಡರಿ ಶಿಕ್ಷಣ ಕೇಂದ್ರದಲ್ಲಿ ಅರುಣಾಚಲ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಟಿಬೆಟನ್ ಶಿಕ್ಷಣ ಕೇಂದ್ರಗಳ ಶಾಲೆಗಳ ಮೂಲಕ, ಕಲಿತ ಸನ್ಯಾಸಿಗಳು ಭಾಷೆ ಮತ್ತು ವೈಜ್ಞಾನಿಕ ವಿಧಾನದ ಮೂಲಕ ಧಾರ್ಮಿಕ ಶಿಕ್ಷಣ ಪಡೆದು ಬೌದ್ಧ ಧರ್ಮದ ಸಾರವನ್ನು ಜಗತ್ತಿಗೆ ತಿಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಖಂಡು, ಭಗವಾನ್ ಬುದ್ಧನ ಬೋಧನೆಗಳನ್ನು ಸಹ ವೈಜ್ಞಾನಿಕವಾಗಿ

(ಮೊದಲ ಪುಟದಿಂದ) ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿರುವ ೨೧ ನೇ ಶತಮಾನದ ಎಲ್ಲಾ ಬೌದ್ಧ ಭಿಕ್ಷುಗಳಿಗೆ ದಲೈ ಲಾಮಾ ಅವರು ನೀಡಿದ ಸಂದೇಶವನ್ನು ನೆನಪಿಸಿದರು. ಈ ಸಂದರ್ಭ ಮೈಸೂರು ರಾಜಮನೆತನದ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಮಾರಂಭದಲ್ಲಿ ಪಾಲ್ಗೊಂಡು ಶುಭಾಶಯ ಕೋರಿದರು.

ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಜಿ. ಹೇಮಂತಕುಮಾರ್, ತಹಶೀಲ್ದಾರ್ ಚಂದ್ರಮೌಳಿ, ಸೆರಾ ಜೇ ಮಠಾಧೀಶರಾದ ಗೆಶೆ ತಾಶಿ ತ್ಸೆಥರ್, ರಾಷ್ಟಿçÃಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ರಿಂಚನ್ ಲಾಮೊ ಮತ್ತಿತರರು ಉಪಸ್ಥಿತರಿದ್ದರು.