ವೀರಾಜಪೇಟೆ, ಆ. ೨೫: ದಾನ - ಧರ್ಮ ಸತ್ಕರ್ಮಗಳಿಂದ ಸಾರ್ಥಕ ಬದುಕು ಕಂಡುಕೊಳ್ಳಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಜಿ ಉಪ ನಿರ್ದೇಶಕರು ಹಾಗೂ ಮದರ್ ಥೆರೆಸಾ ಸೇವಾ ಕೇಂದ್ರ ವೀರಾಜಪೇಟೆಯ ಅಧ್ಯಕ್ಷ ಪಿ.ಎಸ್. ಮಚ್ಚಾಡೊ ಅಭಿಪ್ರಾಯ ವ್ಯಕ್ತಪಡಿಸಿದರು.

ಮದರ್ ಥೆರೆಸಾ ಸೇವಾ ಕೇಂದ್ರ ವತಿಯಿಂದ ಸಂತ ಅನ್ನಮ್ಮ ದೇವಾಲಯದ ದ್ವಿಶತಮಾನ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಎಸ್. ಮಚ್ಚಾಡೊ ಅವರು, ಸೇವೆ ಎಂಬುದು ನಿಂತ ನೀರಲ್ಲ ಸರಾಗವಾಗಿ ಹರಿಯುವ ನೀರು. ಸಮಾಜದಲ್ಲಿ ಮಾಡುವ ಪ್ರತಿಯೊಂದು ಸೇವೆಯು ದೇವನಿಗೆ ಅರ್ಪಣೆಯಾಗುವಂತೆ ಸಂಸ್ಥೆಯು ಶಿಕ್ಷಣ ಮತ್ತು ವೈದ್ಯಕೀಯ ಸೇವೆಗೆ ಪ್ರಥಮ ಆದ್ಯತೆ ನೀಡುತ್ತಿದೆ. ವ್ಯಕ್ತಿಯು ತನ್ನ ಗಳಿಕೆಯ ಒಂದು ಭಾಗವನ್ನು ಪರರ ಸಂಕಷ್ಟವನ್ನು ಪರಿಹರಿಸಲು ನೀಡಿದಲ್ಲಿ ಪ್ರತಿಫಲವಾಗಿ ನಮ್ಮಗಳ ಕಷ್ಟದ ದಿನಗಳಲ್ಲಿ ದೇವರು ಸಹಾಯ ಮಾಡುತ್ತಾನೆ ಎಂದರು.

ಸಂತ ಅನ್ನಮ್ಮ ದೇವಾಲಯದ ಧರ್ಮಕೇಂದ್ರದಲ್ಲಿ ಮರಣ ಫಂಡ್ ಸಮಿತಿಯ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಟೋನಿ ಮೆನೆಜಸ್ ಕೆ. ಥೋಮಸ್ ಜಯ್ ಮತ್ತು ಅನೀಶ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು,

ಸಂಸ್ಥೆಯ ಸಹಕಾರ್ಯದರ್ಶಿ ಅನಿತ ಲೋಬೊ ಅವರು ವಾರ್ಷಿಕ ವರದಿ ವಾಚನ ಮಾಡಿದರು. ಕೋಶಾಧಿಕಾರಿಗಳಾದ ಜೇಮ್ಸ್ ಮೆನೆಜಸ್ ಅವರು ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮದರ್ ಥೆರೆಸಾ ಸೇವಾ ಕೇಂದ್ರದ ಉಪಾಧ್ಯಕ್ಷ ಮಾರ್ಟಿನ್ ಬರ್ನಾಡ್, ಕಾರ್ಯದÀರ್ಶಿ ವಿನ್ಸೆಂಟ್ ಡಿಕೋಸ್ಟ, ಸಹಕಾರ್ಯದರ್ಶಿ ಅನಿತಾ ಲೋಬೊ, ಕೋಶಾಧಿಕಾರಿ ಜೇಮ್ಸ್ ಮೆನೆಜಸ್ ಮತ್ತು ಚಾರ್ಲ್ಸ್ ಡಿಸೋಜಾ ಹಾಗೂ ಇಂದಿರಾ ಅಲ್ಫೋಂಸೊ ಉಪಸ್ಥಿತರಿದ್ದರು.

ಚಾರ್ಲ್ಸ್ ಡಿಸೋಜಾ ಸ್ವಾಗತಿಸಿದರು. ವಿನೆÀ್ಸಂಟ್ ನಿರೂಪಿಸಿದರು ಮತ್ತು ಪ್ರಸಿಲ್ಲಾ ಡಿ. ಅಲ್ಮೇಡಾ ವಂದಿಸಿದರು. ಕಾರ್ಯಕ್ರಮದಲ್ಲಿ ಸಂತ ಅನ್ಮಮ್ಮ ಧರ್ಮ ಕೇಂದ್ರದ ಬಾಂಧÀವರು, ಸಂಸ್ಥೆಯ ಸದಸ್ಯರು ಹಾಜರಿದ್ದರು.