ಚೆಟ್ಟಳ್ಳಿ, ಅ. ೨೪: ದೀಪಾವಳಿ ಪ್ರಯುಕ್ತ ಚೆಟ್ಟಳ್ಳಿ ಶ್ರೀ ವೀರಾಂಜನೇಯ ಯುವಕ ಸಂಘದ ವತಿಯಿಂದ ಸಹಕಾರ ಸಂಘದಲ್ಲಿನ ದೇವರ ಸನ್ನಿಧಿಯಲ್ಲಿ ವಿಶೇಷ ದೀಪಾರಾಧನೆ ನೆರವೇರಿತು.
ದೀಪಾವಳಿಯು ಎಲ್ಲರಿಗೂ ಒಳಿತನ್ನು ಮಾಡಲೆಂದು ಬಲ್ಲಾರಂಡ ಮಣಿ ಉತ್ತಪ್ಪ ಪ್ರಾರ್ಥಿಸಿದರು. ಈ ಸಂದರ್ಭ ವೀರಾಂಜನೇಯ ಯುವಕ ಸಂಘದ ಅಧ್ಯಕ್ಷ ಬಲ್ಲಾರಂಡ ಕಂಠಿಕಾರ್ಯಪ್ಪ, ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪುತ್ತರಿರ ಶಿವುನಂಜಪ್ಪ, ಉಪಾಧÀ್ಯಕೆÀ್ಷ ರೀನಾ, ಪ್ರಧಾನ ಕಾರ್ಯದರ್ಶಿ ಸುನಿಲ್, ಕಾರ್ಯದರ್ಶಿ ಅರುಣ ಸಿದ್ದಿಕಲ್, ಯಶೋದಾ, ಖಜಾಂಚಿ ಮನು ಹಾಗೂ ಸದಸ್ಯರು ಹಾಜರಿದ್ದರು.