ಕಡಂಗ, ಅ. ೨೪: ವೀರಾಜಪೇಟೆಯ ಅನ್ವಾರುಲ್ ಹುದಾ ಹಾಗೂ ಎಸ್‌ಎಸ್‌ಎಫ್, ಎಸ್‌ವೈಎಸ್, ಕೆಎಂಜೆ, ಎಸ್‌ಜೇಎಮ್, ಎಸ್‌ಬಿಎಸ್, ಸುನ್ನೀ ಸಂಘ ಕುಟುಂಬಗಳ ಸಹಯೋಗದಲ್ಲಿ ‘ಅನುಪಮ ವ್ಯಕ್ತಿತ್ವ; ಅನರ್ಘ್ಯ ಸಂದೇಶ’ ಎಂಬ ದ್ಯೇಯ ವಾಕ್ಯದೊಂದಿಗೆ ಬೃಹತ್ ಮಿಲಾದ್ ಸಂದೇಶ ಜಾಥಾ ವೀರಾಜಪೇಟೆಯಲ್ಲಿ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದ್ ಪ್ರಾರ್ಥನೆ ಮೂಲಕ ಜಾಥಾಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನಾಯಿಬ್ ಖಾಝಿ ಶೈಖುನಾ ಶಾದುಲಿ ಫೈಝಿ ಉಸ್ತಾದ್, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಹಫೀಝ್ ಸಅದಿ, ಸಂಸ್ಥೆಯ ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ, ಮುಸ್ಲಿಂ ಜಮಾಅತ್, ಎಸ್‌ವೈಎಸ್ ಜಿಲ್ಲಾ ನಾಯಕರು ಕಾರ್ಯಕರ್ತರು ಭಾಗವಹಿಸಿದ್ದರು.

ಜಿಲ್ಲಾ ಇಸಾಬಾ ತಂಡ ಹಾಗೂ ಹಲವು ಮೊಹಲ್ಲಾದ ಧಫ್ ಹಾಗೂ ಸ್ಕೌಟ್ ತಂಡಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿದವು.

ಸಮಾರೋಪ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಫ್ ರಾಷ್ಟಿçÃಯ ಕಾರ್ಯದರ್ಶಿ ಯಾಕೂಬ್ ಮಾತನಾಡಿ, ಅನುಪಮ ವ್ಯಕ್ತಿತ್ವದ ಪೈಗಂಬರ್ ಮುಹಮ್ಮದ್ ಅವರು ಈ ಜಗತ್ತಿಗೆ ಸಾರಿದ ಸಂದೇಶಗಳು ನಿತ್ಯ ನೂತನವಾಗಿದ್ದು ಆಧುನಿಕ ಜಗತ್ತಿನ ಸರ್ವ ಸಮಸ್ಯೆಗಳಿಗೂ ಅವರ ಸಂದೇಶಗಳಲ್ಲಿ ಪರಿಹಾರವಿದೆ. ಆಧುನಿಕ ತಲೆಮಾರು ಪ್ರವಾದಿವರ್ಯರ ಕುರಿತು ಆಳವಾಗಿ ಅಧ್ಯಯನ ನಡೆಸಬೇಕೆಂದರು.

ಸAಸ್ಥೆಯ ಉಪಾಧ್ಯಕ್ಷ ಸಯ್ಯದ್ ಶಾಫಿ ಭಾಗವಹಿಸಿದ್ದರು. ಅಹಮದ್ ಮದನಿ ಸ್ವಾಗತಿಸಿ, ಉಮರ್ ಎಡಪಾಲ ವಂದಿಸಿದರು.