ಚೆಯ್ಯAಡಾಣೆ, ಅ ೨೪ : ಕೊಡಗಿನ ಅನಿವಾಸಿ ಭಾರತೀಯರ ಸಂಘಟನೆಯಾದ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಘಟಕದ ವತಿಯಿಂದ ನಿರ್ಮಿಸಲಾಗಿರುವ ಮನೆ ಹಸ್ತಾಂತರ ಕಾರ್ಯಕ್ರಮ ತಾ. ೩೦ರಂದು ನಡೆಯಲಿದೆ. ಬಾಳೆಲೆ ಸಮೀಪದ ಮಾಯಮುಡಿ ಬೆಮ್ಮತ್ತಿಯ ಸುನ್ನೀ ವೆಲ್ಫೇರ್‌ನ ಸದಸ್ಯರಾಗಿದ್ದ ದಿವಂಗತ ಸಾಜಿದ್ ಕುಟುಂಬಕ್ಕೆ ವೆಲ್ಫೇರ್ ವತಿಯಿಂದ ದಾರುಲ್ ಖೈರ್ ಮನೆಯನ್ನು ಹಸ್ತಾಂತರ ಮಾಡಲಾಗುವುದು. ಕಾರ್ಯಕ್ರಮಕ್ಕೆ ಕೊಡಗಿನ ನಾಯಿಬ್ ಖಾಝಿಗಳಾದ ಅಬ್ದುಲ್ಲ ಪೈಝಿ ಎಡಪಾಲ ಮತ್ತು ಶಾದುಲಿ ಪೈಝಿ ಆಝದ್ ನಗರ್, ಅನ್ವಾರುಲ್ ಹುದಾ ಸಾರಥಿ ಅಶ್ರಫ್ ಅಹ್ಸನಿ, ವೀರಾಜಪೇಟೆ, ಹಫೀಲ್ ಸಹದಿ, ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಸಯ್ಯದ್ ಇಲ್ಯಾಸ್ ತಂಘಳ್, ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಶಾಫಿ ಸಹದಿ, ದಾರುಲ್ ಖೈರ್ ಚೇರ್ಮೆನ್ ಅಬ್ದುಲ್ಲ ಖಾದರ್ ತಂಘಳ್, ಕೊಡಗು ಸುನ್ನಿ ವೆಲ್ಫೇರ್ ಜಿಸಿಸಿ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಮುಸ್ಲಿಂ ಜಮಾಯತ್ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಬೆಮ್ಮತ್ತಿ ಜಮಾಅತ್ ಮಾಜಿ ಅಧ್ಯಕ್ಷ ಬಾಪು, ಜಿಸಿಸಿ ಸಾಂತ್ವನ ಅಧ್ಯಕ್ಷ ಅರಾಫತ್ ನಾಪೋಕ್ಲು, ಜಿಸಿಸಿ ಸಂಚಾಲಕ ಸಿದ್ದೀಕ್ ಝುಹ್ರಿ, ಶಿಕ್ಷಣ ವಿಭಾಗದ ಕಾರ್ಯದರ್ಶಿ ರಿಯಾಜ್ ಕೊಂಡAಗೇರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಜಿಸಿಸಿ ಸಾಂತ್ವನ ವಿಭಾಗದ ಅಧ್ಯಕ್ಷ ಅರಾಫತ್ ನಾಪೋಕ್ಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.