ಸೋಮವಾರಪೇಟೆ, ಅ. ೨೨: ತಾಲೂಕಿನ ಆಲೂರು ಸಿದ್ದಾಪುರ, ಹಂಡ್ಲಿ ಹಾಗೂ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬAಧಿಸಿದAತೆ ರೂ. ೧೧.೩೫ ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಚಾಲನೆ ನೀಡಿದರು.
ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕ ವರ್ಗದ ಬಹುಕಾಲದ ಬೇಡಿಕೆ ಯಾಗಿದ್ದ ಹೊಸಗುತ್ತಿ ಏತನೀರಾವರಿ ಯೋಜನೆಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಕಳೆದ ನಾಲ್ಕು ದಶಕಗಳಿಂದಲೂ ಏತ ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿದ್ದು, ಪ್ರಸಕ್ತ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ರೂ. ೭ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಬಹು ನಿರೀಕ್ಷಿತ ಕಾಮಗಾರಿಗೆ ರಂಜನ್ ಅವರು ಚಾಲನೆ ನೀಡಿದರು.
ಈ ಸಂದರ್ಭ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಬಹುಕಾಲದ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದ್ದು, ಕೃಷಿಕರು ಇದರ ಸದುಪಯೋಗಪಡೆದು ಕೊಳ್ಳಬೇಕು. ಯೋಜನೆಯಂತೆ ಕಾಮಗಾರಿ ನಡೆಯಬೇಕು. ಗ್ರಾಮಸ್ಥರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮೂಲಕ ಅನುಷ್ಠಾನಗೊಳ್ಳುತ್ತಿರುವ ರೂ.೪ ಲಕ್ಷ ವೆಚ್ಚದ ಮಾಲಂಬಿ ಕಣಿವೆ ಬಸವನಹಳ್ಳಿ ರಸ್ತೆ ಅಭಿವೃದ್ಧಿ, ಅಂಚೆ ಕಚೇರಿ ಕನ್ನಬಾಡಿಯಮ್ಮ ದೇವಾಲಯ ರಸ್ತೆ ಡಾಂಬರೀಕರಣ, ರೂ. ೪ ಲಕ್ಷ ವೆಚ್ಚದ ಹೊಸಗುತ್ತಿ-ಹೊಸಳ್ಳಿ ರಸ್ತೆ ಅಭಿವೃದ್ಧಿ, ರೂ.೫ ಲಕ್ಷ ವೆಚ್ಚದ ಸೀಗೇಮರೂರು ಪರಿಶಿಷ್ಟ ಜಾತಿ ಕಾಲೋನಿಯಿಂದ ಕೈಸರವಳ್ಳಿ ಗ್ರಾಮ ಸಂಪರ್ಕದ ರಸ್ತೆ ಡಾಂಬರೀಕರಣ ಕಾಮಗಾರಿ, ರೂ.೪ ಲಕ್ಷ ವೆಚ್ಚದ ಮೆಣಸ ಬೆಟ್ಟದಳ್ಳಿ ಊರೊಳಗಿನ ರಸ್ತೆ ಅಭಿವೃದ್ಧಿ
(ಮೊದಲ ಪುಟದಿಂದ) ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಇದರೊಂದಿಗೆ ಎಸ್.ಸಿ.ಪಿ. ಯೋಜನೆಯಡಿ ರೂ. ೨೦ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಸೀಗೇಮರೂರು ಪರಿಶಿಷ್ಟಜಾತಿ ಕಾಲೋನಿ-ಮಾಗಲು ಕಾಲೋನಿ ರಸ್ತೆ ಅಭಿವೃದ್ಧಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ೧.೬೦ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವ ಅಂಕನಳ್ಳಿ-ಕೈಸರವಳ್ಳಿ ರಸ್ತೆ ಅಭಿವೃದ್ಧಿ ಸೇರಿದಂತೆ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೯.೧ ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಚಾಲನೆ ನೀಡಿದರು.
ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್.ಸಿ.ಪಿ. ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ರೂ.೨೦ ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿ, ರೂ.೪ ಲಕ್ಷ ವೆಚ್ಚದ ನಾಕಲಗೋಡು ರಸ್ತೆ, ರೂ.೫ ಲಕ್ಷ ವೆಚ್ಚದ ಹಂಡ್ಲಿ-ಹುಲುಸೆ ರಸ್ತೆ ಡಾಂಬರೀಕರಣ, ರೂ.೫ ಲಕ್ಷದ ನಾಕಲಗೋಡು ರಸ್ತೆಯ ಮುಂದುವರೆದ ಕಾಮಗಾರಿಗಳಿಗೆ ರಂಜನ್ ಭೂಮಿಪೂಜೆ ನೆರವೇರಿಸಿದರು.
ನೀರಾವರಿ ಇಲಾಖೆ ಮೂಲಕ ರೂ. ೨ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುವ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಾರಳ್ಳಿ-ಬ್ಯಾಡಗೊಟ್ಟ, ತಳಗೂರು-ಬ್ಯಾಡಗೊಟ್ಟ, ನವಗ್ರಾಮ-ಕೊಡ್ಲಿಪೇಟೆ, ಸಂಪಿಗೆದಾಳು-ಹAಡ್ಲಿ ವ್ಯಾಪ್ತಿಯ ನೀರಾವರಿ ಯೋಜನೆಗಳು ಸೇರಿದಂತೆ, ಹಂಡ್ಲಿ ಹಾಗೂ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨.೩೪ ಕೋಟಿ ವೆಚ್ಚದ ಕಾಮಗಾರಿಗಳಿಗೆ ಇದೇ ಸಂದರ್ಭ ಚಾಲನೆ ನೀಡಲಾಯಿತು.
ಆಲೂರುಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಮೋಹನ್ ಸೇರಿದಂತೆ ಸದಸ್ಯರುಗಳು, ಬಿಜೆಪಿ ಪ್ರಮುಖರಾದ ಜಯಕುಮಾರ್, ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾದೇವಿ ಹಾಗೂ ಸದಸ್ಯರುಗಳು, ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷರಾದ ಲೀನಾ ಪರಮೇಶ್ ಸೇರಿದಂತೆ ಸದಸ್ಯರು, ಸಾರ್ವಜನಿಕರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.