ಮಡಿಕೇರಿ, ಅ. ೨೨: ವೀರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದಲ್ಲಿ ನೂರಾರು ವರ್ಷಗಳ ಹಿಂದೆ ಇದ್ದ ದೇವಾಲಯವೊಂದು ಪಾಳು ಬಿದ್ದಿದ್ದು, ಇದೀಗ ಇದರ ಕಾಯಕಲ್ಪಕ್ಕೆ ಪ್ರಯತ್ನ ನಡೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಈ ವಿಚಾರ ಅರಿವಿಗೆ ಬಂದಿತ್ತಾದರೂ ಕಾರಣಾಂತರಗಳಿAದ ಜೀರ್ಣೋ ದ್ಧಾರದ ಕೆಲಸ ಮತ್ತೆ ನೆನಗುದಿಗೆ ಬಿದ್ದಿತ್ತು. ಇದೀಗ ಸರ್ವ ಗ್ರಾಮಸ್ಥರು ಈ ಬಗ್ಗೆ ಮತ್ತೆ ಒಲವು ತೋರಿದ್ದು, ಹಂತ ಹಂತವಾಗಿ ಪ್ರಯತ್ನಗಳು ನಡೆಯುತ್ತಿವೆ.

ದೇವಾಲಯಕ್ಕೆ ಸಂಬAಧಿಸಿದ ವಿವಿಧ ವಸ್ತುಗಳನ್ನು ಈ ಸ್ಥಳದ ವ್ಯಾಪ್ತಿಯಲ್ಲಿ ಪತ್ತೆ ಹಚ್ಚಲಾಗಿದೆ. ದೇವರಿಗೆ ಸಂಬAಧಿಸಿದ ಈ ವಸ್ತುಗಳನ್ನು ಕ್ರೋಢೀಕರಿಸಲಾಗಿದೆ. ದೈವಿಕ ವಿಧಿ-ವಿಧಾನಗಳ ಪ್ರಕಾರ ಈ ದೇವಾಲಯವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಈ ಕುರಿತಾದ

(ಮೊದಲ ಪುಟದಿಂದ) ಮುಂದಿನ ಕೆಲಸ-ಕಾರ್ಯಗಳು ಇನ್ನಷ್ಟೆ ಆರಂಭಗೊಳ್ಳಬೇಕಾಗಿದೆ.

ಈ ದೇವಾಲಯವನ್ನು ಮಾದೇರಪ್ಪ ದೇವರು ಎಂದು ಈ ಹಿಂದೆ ಕರೆಯಲ್ಪಡಲಾಗುತ್ತಿತ್ತು ಎನ್ನಲಾಗಿದೆ. ಈ ಕುರಿತಾದ ಪುರಾತನ ಇತಿಹಾಸ ಮತ್ತಿತರ ಹೆಚ್ಚಿನ ವಿವರಗಳು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಪ್ರಸ್ತುತ ಈ ಬಗ್ಗೆ ಊರಿನವರ ಸಮಿತಿಯೊಂದನ್ನು ರಚಿಸಿ ಈ ಕುರಿತ ಕೆಲಸ-ಕಾರ್ಯಗಳಿಗೆ ಚಾಲನೆ ನೀಡಲಾಗಿದೆ.

ಕಡಂಗ ಪಾರಾಣೆ ರಸ್ತೆಯ ನಡುವಿನ ಬೊಳ್ಳುಮಾಡು ಗ್ರಾಮದಲ್ಲಿ ಪ್ರಸ್ತುತ ಅರಣ್ಯದಂತಿರುವ ಪ್ರದೇಶದಲ್ಲಿ ದೇವಾಲಯದ ಕುರುಹುಗಳು ಕಂಡು ಬಂದಿದ್ದು, ಸುಮಾರು ೮೦೦ ವರ್ಷಗಳ ಹಿಂದಿನದ್ದು ಎಂದು ಹೇಳಲಾಗುತ್ತಿದೆ.