ಮಡಿಕೇರಿ, ಅ. ೨೨: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ನಡೆಯಿತು. ೧೮ ವಿವಿಧ ವಿಭಾಗದ ಪ್ರಶಸ್ತಿಯನ್ನು ೧೬ ಪತ್ರಕರ್ತರು ಪಡೆದುಕೊಂಡರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲೆಯ ಪತ್ರಕರ್ತರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಕು ಚೆಲ್ಲುವ ವರದಿಗೆ ಉತ್ತಮ ಪ್ರತಿಕ್ರಿಯೆ ದೊರೆತರೆ ಸಾರ್ಥಕತೆ ದೊರೆಯುತ್ತದೆ. ಇಂದು ಆಧುನಿಕತೆಯೊಂದಿಗೆ ಕೆಲಸ ಮಾಡುವ ಕಾಲ ಬಂದಿದೆ. ನಮ್ಮ ಕಾರ್ಯವೈಖರಿ ಬದಲಾಗಿದೆ. ನೇರ ವರದಿಯಿಂದ ಗ್ರಹಿಸುವಿಕೆ, ವಾಸ್ತವಾಂಶ ತಿಳಿಯುತ್ತದೆ. ವರದಿಯಲ್ಲಿ ಸ್ಪಷ್ಟತೆ ಬೇಕು. ಪಾಲ್ಗೊಳ್ಳುವಿಕೆ ಇರಬೇಕು. ಸೂಕ್ಷ್ಮತೆ ಅರಿತರೆ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಾಧ್ಯಮದ ಮೇಲೆ ಜನರಿಗೆ ಇಂದಿಗೂ ನಂಬಿಕೆ ಇದೆ. ಸಾಮಾಜಿಕ ಜಾಲತಾಣದ ಪ್ರಭಾವ ಇದ್ದರೂ ಪತ್ರಿಕೆ, ಟಿವಿಗಳಲ್ಲಿ ಬರುವ ವಿಷಯವನ್ನು ಜನ ನಂಬುತ್ತಾರೆ. ಅಲ್ಲದೇ ಪತ್ರಿಕೋದ್ಯಮದಲ್ಲಿ ಛಾಯಾಗ್ರಾಹಕರ ಪಾತ್ರವೂ ಪ್ರಮುಖವಾಗಿದೆ. ಸಾವಿರ ಅಕ್ಷರಗಳು ಹೇಳುವ ವಿಷಯವನ್ನು ಒಂದು ಫೋಟೋ ಹೇಳುತ್ತದೆ ಎಂದರು.

ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿ, ಪತ್ರಕರ್ತರ ಕೆಲಸದಲ್ಲಿ ನಿತ್ಯ ಕಲಿಕೆ ಇರುತ್ತದೆ. ಪತ್ರಕರ್ತರು ವಿದ್ಯಮಾನಗಳ ಬಗ್ಗೆ , ಎಲ್ಲಾ ಕ್ಷೇತ್ರಗಳಲ್ಲಿನ ಆಗುಹೋಗಗಳ ಕುರಿತು ತಿಳಿದುಕೊಳ್ಳಬೇಕು. ಇಂದು ಪತ್ರಕರ್ತರು ಒತ್ತಡದ ನಡುವೆ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಮಟ್ಟದ ವಿಷಯ, ವಿವಾದದೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಪತ್ರಕರ್ತರು ರಾಜಕಾರಣಿಗಳ ಗಮನ ಸೆಳೆಯಬೇಕು. ವಿಷಯದ ಗಂಭೀರತೆ ಅರಿತು ಕೆಲಸ ಮಾಡಬೇಕು ಎಂದು ಕರೆ ನೀಡಿದ ಅವರು, ಪ್ರತಿಕೂಲ ಪರಿಸ್ಥಿತಿಯಲ್ಲಿ ಜಿಲ್ಲೆಯ ವರದಿಗಾರರು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರಿಗೆ ಪ್ರೋತ್ಸಾಹದ ಅಗತ್ಯತೆ ಇದೆ. ಪ್ರಶಸ್ತಿಯಿಂದ ಅವರ ಕೆಲಸಕ್ಕೆ ಮನ್ನಣೆ ದೊರೆತಂತಾಗುತ್ತದೆ. ಜಿಲ್ಲೆಯಲ್ಲಿರುವ ಗಂಭೀರ ಸಮಸ್ಯೆಗಳಿಗೆ ಸರಕಾರ ರಚನಾತ್ಮಕ ಪರಿಹಾರ ದೊರಕಿಸುವಲ್ಲಿ ವಿಫಲವಾಗಿದೆ. ಪತ್ರಕರ್ತ ಜನರ ಪ್ರತಿನಿಧಿಯಾಗಿದ್ದು, ಸಂಘಟಿತರಾಗಿ ವರದಿ ಮಾಡುವ ಮೂಲಕ ಸರಕಾರದ ಗಮನ ಸೆಳೆಯಬೇಕು.

(ಮೊದಲ ಪುಟದಿಂದ) ದಾಖಲೆ ರಹಿತ ಆರೋಪಗಳ ಬಗ್ಗೆ ನಿಗಾವಹಿಸಬೇಕು. ಇಲ್ಲವಾದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾಗಬೇಕಾಗುತ್ತದೆ. ಸುದ್ದಿಯನ್ನು ಒಳಹೊಕ್ಕು ಅವಲೋಕಿಸಿ ವರದಿ ಮಾಡಬೇಕು ಇದರೊಂದಿಗೆ ಆರೋಗ್ಯದ ಬಗ್ಗೆಯೂ ಕಾಳಜಿ ಇರಲಿ ಎಂದು ಕರೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಪ್ರಶಸ್ತಿಗಳು ನಮ್ಮನ್ನು ಗುರುತಿಸುವಂತೆ ಮಾಡುತ್ತದೆ. ಪತ್ರಕರ್ತರು ಜಾಗೃತೆಯಿಂದ ಕೆಲಸ ಮಾಡಬೇಕು. ವೇಗವಾಗಿ ಸುದ್ದಿ ಮಾಡುವ ಭರದಲ್ಲಿ ಸುಳ್ಳು ಮಾಹಿತಿಗಳು ಜನರನ್ನು ತಲುಪುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿದ್ದ ಕೆ.ಎ. ಆದಿತ್ಯ ಅವರು ಬೆಂಗಳೂರಿಗೆ ವರ್ಗಾವಣೆ ಆದ ಹಿನ್ನೆಲೆ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಪ್ರಶಸ್ತಿ ಪುರಸ್ಕೃತರು : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ನೀಡಲಾಗುವ ಪಂದ್ಯAಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿಯ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ''ನೆಟ್‌ವರ್ಕ್ಗಾಗಿ ಮರವೇರುತ್ತಿರುವ ವಿದ್ಯಾರ್ಥಿಗಳು'' ವರದಿಗೆ ಕಿಶೋರ್ ಶೆಟ್ಟಿ, ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ``ಮರದ ನೆರಳು, ಮನೆಯ ಜಗುಲಿ ಮಕ್ಕಳ ಪಾಠಶಾಲೆ'' ವರದಿಗೆ ಹೆಚ್.ಕೆ. ಜಗದೀಶ್, ಎಸ್.ಎ. ಮುರುಳೀಧರ್ ತಮ್ಮ ತಾಯಿ ಪಾರ್ವತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಕೃಷಿ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ``ಉನ್ನತ ಉದ್ಯೋಗದಲ್ಲಿದ್ದರೂ ಕೃಷಿಯತ್ತ ಆಸಕ್ತಿ’’ ವರದಿಗೆ ಪಳೆಯಂಡ ಪಾರ್ಥ ಚಿಣ್ಣಪ್ಪ ಪಡೆದುಕೊಂಡರು.

ಸAಘದ ಮಾಜಿ ಅಧ್ಯಕ್ಷ ಕೆ.ಕೆ. ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ ``ಕಾಫಿ ನಾಡಲ್ಲಿ ಚಿಗುರಿದ ಮಹಿಳಾ ಫುಟ್ಬಾಲ್ ಕ್ಲಬ್'' ವರದಿಗೆ ಕೆ.ಎಂ. ಇಸ್ಮಾಯಿಲ್ ಕಂಡಕೆರೆ, ಸಂಘದ ಮಾಜಿ ಉಪಾಧ್ಯಕ್ಷ ಸಿ.ಎನ್. ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ಟಿವಿ೯ ಕ್ಯಾಮರಾಮೆನ್ ನವೀನ್ ಸುವರ್ಣ ``ಹಸಿರೂರಿಗೆ ಮಂಜಿನ ಸೀರೆ'' ವರದಿ, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ಪ್ರಶಸ್ತಿಯನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ``ಕಾಡಾನೆ ಉಪಟಳ, ಜಿಲ್ಲೆಯ ರೈತರು ಹೈರಾಣ'' ವರದಿಗೆ ರಘು ಹೆಬ್ಬಾಲೆ, ಕೈಬುಲೀರ ಪಾರ್ವತಿ ಬೋಪಯ್ಯ ತಮ್ಮ ತಂದೆ-ತಾಯಿ ಉತ್ತಯ್ಯ-ಸುಬ್ಬವ್ವ ಹೆಸರಿನಲ್ಲಿ ಸ್ಥಾಪಿಸಿರುವ ಪರಿಸರ ಮತ್ತು ನೈರ್ಮಲ್ಯ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ''ಜಿಲ್ಲೆಯಲ್ಲಿದೆ ಹೆಚ್ಚು ನೈಸರ್ಗಿಕ ಆಕ್ಸಿಜನ್ ''ವರದಿಗೆ ಸಣ್ಣುವಂಡ ಕಿಶೋರ್ ನಾಚಪ್ಪ , ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ಮಂದ್ರೀರ ಮೋಹನ್ ದಾಸ್ ಅವರು ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರದಿ ಪ್ರಶಸ್ತಿಯನ್ನು ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾದ ``ಕಾಫಿಗೆ ಬೆಸೆದ ಹೈನುಗಾರಿಕೆ ಯಶಸ್ಸು ಕಂಡ ದಂಪತಿ'' ವರದಿಗೆ ಹಿರಿಕರ ರವಿ (ಹೆಚ್.ಇ. ರವಿ) ಭಾಜನರಾದರು.

ಶಕ್ತಿ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಅವರು ತಮ್ಮ ಹೋಂಸ್ಟೇ ಆಲ್ಫೆನ್ ಗ್ಲೋ ಹೆಸರಿನಲ್ಲಿ ಸ್ಥಾಪಿಸಿರುವ ಸುದ್ದಿಛಾಯಾಚಿತ್ರ ಪ್ರಶಸ್ತಿಯನ್ನು ಸ್ಟಾರ್ ಆಫ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ ''ಮೋಂಕ್ ಆರ್ಟ್ ಎಟ್ ಟಿಬೇಟಿಯನ್'' ಚಿತ್ರಕ್ಕೆ ಪಿ.ವಿ.ಅಕ್ಷಯ್, ಬೆಳೆಗಾರ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ ತಾಯಿ ಅಜ್ಜಮಾಡ ಸುಬ್ಬಯ್ಯ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ವರದಿ ಪ್ರಶಸ್ತಿಯನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ``ಸಿಮೆಂಟ್ ಕಂಬದಲ್ಲಿ ಅರಳಿದ ಕಪ್ಪು ಚಿನ್ನ'' ವರದಿಗೆ ರೆಜಿತ್ ಕುಮಾರ್ ಗುಹ್ಯ, ಕೋವರ್‌ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಅವರ ಹೆಸರಿನಲ್ಲಿ ಸ್ಥಾಪಿಸಿದ ಮಾನವೀಯ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ``ಕಳೆದು ಹೋದವಳ ಏಳು ವರ್ಷಗಳ ನಂತರ ಕೈಹಿಡಿದು ಕರೆದೊಯ್ದರು'' ವರದಿಗೆ ಚಂದನ್ ನಂದರಬೆಟ್ಟು, ಮಂಡಿಬೆಲೆ ರಾಜಣ್ಣ ತಮ್ಮ ತಾಯಿ ದ್ಯಾವಮ್ಮ ಶ್ಯಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ದೃಶ್ಯಮಾಧ್ಯಮ ವರದಿ ಪ್ರಶಸ್ತಿಯನ್ನು ಚಿತ್ತಾರ ಚಾನಲ್‌ನಲ್ಲಿ ಪ್ರಸಾರವಾದ ``ಮುಕ್ಕೋಡ್ಲುವಿನಲ್ಲಿ ಅಪರೂಪದ ಕೀಟ ಪ್ರಬೇಧ''ವರದಿಗೆ ಸಂತೋಷ್ ರೈ, ತೇನನ ರಾಜೇಶ್ ಅವರು ತಮ್ಮ ತಂದೆ ದಿವಂಗತ ತೇನನ ಸೋಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಸೇನೆಗೆ ಸಂಬAಧಿಸಿದ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಯನ್ನು ದಿಗ್ವಿಜಯ ಚಾನಲ್ ನಲ್ಲಿ ಪ್ರಸಾರವಾದ ''ಯೋಧರ ನಾಡಲ್ಲಿ ಲೋಕಾರ್ಪಣೆಯಾಯ್ತು ಪ್ರಥಮ ವಾರ್ ಮ್ಯೂಸಿಯಂ'' ವರದಿಗೆ ಬಾಚರಣಿಯಂಡ ಅನುಕಾರ್ಯಪ್ಪ, ದಿವಂಗತ ಸಣ್ಣುವಂಡ ಎಂ ಚಂಗಪ್ಪ ಅವರ ಹೆಸರಿನಲ್ಲಿ ಕೊಡಗಿನ ಪತ್ರಕರ್ತರು ಸ್ಥಾಪಿಸಿರುವ ಸೇನೆಗೆ ಸಂಬAಧಿಸಿದ ದೃಶ್ಯ ಮಾಧ್ಯಮ ವರದಿಗೆ ದಿಗ್ವಿಜಯ ಚಾನಲ್ ನಲ್ಲಿ ಪ್ರಸಾರವಾದ ; ಬಿಪಿನ್ ರಾವತ್ ಕೊಡಗು ನಂಟು; ವರದಿಗೆ ಬಾಚರಣಿಯಂಡ ಅನುಕಾರ್ಯಪ್ಪ, ವಕೀಲರಾದ ಪಿ.ಕೃಷ್ಣಮೂರ್ತಿ ಅವರು ತಮ್ಮ ತಂದೆ ದಿವಂಗತ ಟಿ.ಕೆ. ಸುಬ್ರಹ್ಮಣ್ಯ ಭಟ್ ಪಂಜಿತ್ತಡ್ಕ ಅವರ ಸ್ಮರಣಾರ್ಥ ಸ್ಥಾಪಿಸಿರುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಮಾನವೀಯ ವರದಿ ಪ್ರಶಸ್ತಿಯನ್ನು ಟಿವಿ೯ ಚಾನಲ್‌ನಲ್ಲಿ ಪ್ರಸಾರವಾದ ''ಓ ಗೆಳೆಯ ಜೀವದ ಗೆಳೆಯ'' ವರದಿಗೆ ಸುರೇಶ್, ಆಪ್ತ ಸಮಾಲೋಚಕಿ ತೇಲಪಂಡ ಆರತಿ ಸೋಮಯ್ಯ ತಮ್ಮ ಮಾವ ಕೋಟೆರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಆರೋಗ್ಯ ವರದಿ ಪ್ರಶಸ್ತಿಯನ್ನು ವಿಜಯಕರ್ನಾಟಕ ಪತ್ರಿಕೆಯಲ್ಲಿ ‘‘ಪ್ರಕಟವಾದ ಕೊರೊನಾ ವಿರುದ್ಧ ಬುಡಕಟ್ಟು ಅಸ್ತç’’ ವರದಿಗೆ ಜಗದೀಶ್ ಜೋಡುಬೀಟಿ, ಜಿ.ಪಂ. ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ತಮ್ಮ ತಾಯಿ ಬಲ್ಲಾರಂಡ ಮಾಚಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ರಾಜಕೀಯ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ``ಜೆಡಿಎಸ್‌ನತ್ತ ಮುತ್ತಪ್ಪ ತಂಡ’’ ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ``ಕೊಡಗು ಪೊಲೀಸ್ ಖಜಾನೆಯಲ್ಲಿ ೧೬.೯೬ ಲಕ್ಷ ಲೂಟಿ ವರದಿಗೆ ಅಜ್ಜಮಾಡ ರಮೇಶ್ ಕುಟ್ಟಪ್ಪ ಪಡೆದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪತ್ರಿಕಾ ಒಕ್ಕೂಟ ಸದಸ್ಯ ಸುನಿಲ್ ಪೊನ್ನೇಟಿ, ವಿವಿಧ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರುಗಳಾದ ಎಂ.ಎನ್.ಚAದ್ರಮೋಹನ್, ವಿಜಯ ಹಾನಗಲ್, ಕೆ.ಕೆ.ರೆಜಿತ್ ಕುಮಾರ್ ಗುಹ್ಯ, ಸಣ್ಣುವಂಡ ಕಿಶೋರ್ ನಾಚಪ್ಪ ಹಾಜರಿದ್ದರು.

ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಸ್ವಾಗತಿಸಿ, ಸದಸ್ಯ ಗಣೇಶ್ ಕುಡೆಕಲ್ಲು ಪ್ರಾರ್ಥಿಸಿ, ಖಜಾಂಜಿ ಆನಂದ್ ಕೊಡಗು ನಿರೂಪಿಸಿ, ಉಪಾಧ್ಯಕ್ಷ ಪಳೆಯಂಡ ಪಾರ್ಥ ಚಿಣ್ಣಪ್ಪ ವಂದಿಸಿದರು.