ಗೋಣಿಕೊಪ್ಪ ವರದಿ, ಅ. ೨೨: ಪೊನ್ನಂಪೇಟೆಯ ವಿ.ಎಸ್. ಸಂಘಟನೆ ವತಿಯಿಂದ ಡಿಸೆಂಬರ್ ೨೨ ರಿಂದ ೨೫ ರವರೆಗೆ ೨ನೇ ವರ್ಷದ ಕ್‌ಗ್ಗಟ್ಟ್ನಾಡ್ ಪ್ರೀಮಿಯರ್ ಲೀಗ್ (ಕೆ.ಪಿ.ಎಲ್.) ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಸಂಘಟನೆ ಅಧ್ಯಕ್ಷ ಕಾಕಮಾಡ ಅಜಿತ್ ತಿಳಿಸಿದರು.

ಪ್ರೆಸ್ ಕ್ಲಬ್‌ನಲ್ಲಿ ಕೆ.ಪಿ.ಎಲ್. ಲೋಗೋ ಅನಾವರಣಗೊಳಿಸಿ ಮಾತನಾಡಿ, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ೪ ದಿನ ಪಂದ್ಯಾಟ ನಡೆಯಲಿದ್ದು, ತಾ. ೨೩ ರಂದು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ ಎಂದರು. ವಿ.ಎಸ್. ಕ್ರಿಕೆಟರ್ಸ್, ಟೀಂ ಐಕಾನ್, ಹುದಿಕೇರಿ ವಾರಿಯರ್, ಎ.ಜೆ. ಬಾಯ್ಸ್, ಫಾರೆಸ್ಟ್, ಧನಲಕ್ಷಿö್ಮ, ವಿದ್ಯಾ ಕ್ರಿಕೆಟರ್ಸ್, ಕಣ್ಣನ್ ಟರ‍್ಸ್, ಡಿಹೆಚ್‌ಎಸ್, ಎಒನ್, ವಿರಾಟ್ ಕ್ರಿಕೆಟರ್ಸ್, ಬ್ಲಾö್ಯಕ್ ಕೋಬ್ರಾ, ಕೈಕೇರಿ, ಬೊಟ್ಯತ್ನಾಡ್, ಪ್ರತಿಭಾ, ಎಸಿ ಕ್ರಿಕೆಟರ್ಸ್ ತಂಡಗಳು ಭಾಗವಹಿಸಲಿವೆ. ವಿಜೇತ ತಂಡಗಳಿಗೆ ಟ್ರೋಫಿಯೊಂದಿಗೆ ೬೬ ಸಾವಿರ, ೩೩ ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು. ಟೂರ್ನಿ ಪ್ರಮುಖರಾದ ಸಂತೋಷ್ ಪಿಟ್ಟೆ, ವೇಣುಗೋಪಾಲ್, ಸಂತೋಷ್, ಗಣೇಶ್ ಪಾಂಡಿ ಇದ್ದರು.