ವೀರಾಜಪೇಟೆ, ಅ. ೨೨: ವಿದ್ಯಾರ್ಥಿಗಳು ಶಿಕ್ಷಣದ ಹಂತ ದಿಂದಲೇ ಉದ್ಯೋಗ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಮಂಗಳೂರಿನ ಸೆಂಟ್ ಅಲೋಶಿ ಯಸ್ ಕಾಲೇಜಿನ ಎಂ.ಬಿ.ಎ ವಿಭಾಗದ ಪ್ರಾಧ್ಯಾಪಕ ಡಾ. ಎಸ್. ನಾಗೇಂದ್ರ ಅಭಿಪ್ರಾಯಪಟ್ಟರು.

ವೀರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಉದ್ಯೋಗ ಹಾಗೂ ಕೌಶಲ್ಯ ಘಟಕದ ವತಿ ಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆದ ಉದ್ಯೋಗ ಮಾಹಿತಿ ಹಾಗೂ ಸರ್ಟಿಫಿಕೇಟ್ ಕೋರ್ಸ್ನ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪದವಿ ಹಂತದಿAದಲೇ ವಿದ್ಯಾರ್ಥಿಗಳು ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ಉದ್ಯೋಗವನ್ನು ಪಡೆಯಲು ಇರುವ ಅನೇಕ ತರಬೇತಿಗಳನ್ನು ಪಡೆಯಬೇಕು. ಆ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿಗಿಂತಲೂ ಅನುಭವ ಹಾಗೂ ಉದ್ಯೋಗ ಕೌಶಲ್ಯವೇ ಪ್ರಧಾನವಾಗಿದೆ ಎಂದ ಅವರು, ವಿದ್ಯಾರ್ಥಿಗಳು ಈ ಹಂತದಿAದಲೇ ಉದ್ಯೋಗ ಪಡೆಯಲು ಮಾರ್ಗೋಪಾಯವನ್ನು ಹುಡುಕಬೇಕೆಂದರು.

ಕಾಲೇಜಿನ ಐಕ್ಯೂಎಸಿ ಘಟಕದ ಸಂಚಾಲಕಿ ಹೇಮ ಬಿ.ಡಿ. ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಉದ್ಯೋಗ ಪಡೆಯಲು ತಾಂತ್ರಿಕ ಪರಿಣತಿಯು ಅತ್ಯಗತ್ಯ ವಾಗಿರುತ್ತದೆ. ತಂತ್ರಜ್ಞಾನವು ದಿನನಿತ್ಯ ಬದಲಾಗುತ್ತಿದ್ದು ಎಲ್ಲರಿಗೂ ಆ ಬದಲಾವಣೆಗೆ ಹೊಂದಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಪದವಿ ಕಾಲೇಜಿನ ಪ್ರಾಂಶುಪಾಲೆ ಮಾಳೇಟಿರ ತೃಪ್ತಿ ಬೋಪಣ್ಣ ಮಾತನಾಡಿ, ಅಭಿವೃದ್ಧಿ ಹೊಂದು ತ್ತಿರುವ ರಾಷ್ಟçಗಳಲ್ಲಿ ಜನಸಂಖ್ಯಾ ಸ್ಫೋಟವು ಒಂದು ಸಮಸ್ಯೆಯಾಗಿದ್ದು ಅದರೊಟ್ಟಿಗೆ ಉದ್ಯೋಗ ಕಲ್ಪಿಸುವುದು ಅತೀ ದೊಡ್ಡ ಸವಾಲಾಗಿದೆ. ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯ ಲಭ್ಯತೆಯನ್ನು ಗಮನಿಸಿ ಅದಕ್ಕೆ ಸಜ್ಜಾಗಬೇಕೆಂದು ಕಿವಿಮಾತು ಹೇಳಿದರು. ಕಾಲೇಜಿನ ಉದ್ಯೋಗ ಹಾಗೂ ಕೌಶಲ್ಯ ಘಟಕದ ಅಧಿಕಾರಿ ಸಂಕೇತ್ ಅÀವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಬಿ. ಶ್ರೀಯ ನಿರೂಪಿಸಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಅಂತಿಮ ಪದವಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.