ಶನಿವಾರಸಂತೆ, ಅ. ೨೨: ಸೋಮವಾರಪೇಟೆ ತಾಲೂಕು ಸ್ತಿçÃಶಕ್ತಿ ಸೊಸೈಟಿ ಅಧ್ಯಕ್ಷೆಯಾಗಿರುವ ಶನಿವಾರಸಂತೆಯ ಎನ್.ಕೆ. ಸುಮತಿ ಸತೀಶ್ ಅವರು ಕೆಂಪಮ್ಮ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಅವರ ಸಮಾಜ ಸೇವೆಯನ್ನು ಗಮನಿಸಿ, ಮೈಸೂರಿನ ಜಾಗೃತಿ ಟ್ರಸ್ಟ್ ವತಿಯಿಂದ ಕಲಾಮಂದಿರದ ಕಿರುಮಂದಿರದಲ್ಲಿ ನಡೆದ ನಗೆಹಬ್ಬ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡರ ತಾಯಿ ಕೆಂಪಮ್ಮ ಅವರ ಹೆಸರಿನಲ್ಲಿ ಕೊಡುವ ಕೆಂಪಮ್ಮ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಸ್ಯ ಕಲಾವಿದ ಎಂ.ಎಸ್. ನರಸಿಂಹಮೂರ್ತಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಅತಿಥಿಗಳಾಗಿ ಸಮಾಜ ಸೇವಕಿ ಡಾ. ಭಾಗೀರಥಿ ರೆಡ್ಡಿ, ಕಾವೇರಿ ಶುಭಶ್ರೀ, ಸುರೇಶ್, ಗಿರೀಶ್ ಜೀವನಧಾರ, ಕುಮಾರ್, ಶಿವಮೂರ್ತಿ, ರಘು ಕೋಟಿ ಹಾಗೂ ಜಾಗೃತಿ ಟ್ರಸ್ಟ್ ಅಧ್ಯಕ್ಷ ಬಿ. ನಾಗೇಶ್ ಹಾಜರಿದ್ದರು.