ಭಾರತವು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದ್ದು, ವಿವಿಧ ಜನಾಂಗೀಯ ಹಿನ್ನೆಲೆಯಿಂದ ಬರುವ ಜನರು ತಮ್ಮ ಸಂಸ್ಕೃತಿ ಮತ್ತು ಧರ್ಮಗಳನ್ನು ಆಚರಿಸಲು ಒಂದುಗೂಡುತ್ತಾರೆ. ದೀಪಾವಳಿ ಅಥವಾ ದೀವಾಲಿ ದೇಶಾ ದ್ಯಂತ ಆಚರಿಸಲಾಗುವ ಭಾರತೀಯ ಹಬ್ಬಗಳಲ್ಲಿ ಅತ್ಯಂತ ಸಂಭ್ರಮ ಸಡಗರ ದಿಂದ ಆಚರಿಸುವ ಒಂದು ಹಬ್ಬವಾಗಿದೆ. ಇದನ್ನು ‘‘ಬೆಳಕಿನ ಹಬ್ಬ” ಎಂದೂ ಕರೆಯುತ್ತಾರೆ. ಕುಟುಂಬ ಗಳು ಒಟ್ಟಿಗೆ ಸೇರುತ್ತಾರೆ, ಪುನರ್ಮಿಲನ ಗಳನ್ನು ನಡೆಸಲು, ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸುತ್ತಾರೆ, ಈ ದಿನ ಅಷ್ಟೆöÊಶ್ವರ್ಯ ಕ್ಕಾಗಿ ಲಕ್ಷಿö್ಮ ದೇವಿಯನ್ನು ಪ್ರಾರ್ಥಿಸುವ ಹಬ್ಬವಾಗಿದೆ. ಭಾರತದ ಉತ್ತರ ರಾಜ್ಯಗಳು ಈ ಹಬ್ಬವನ್ನು ದೀವಾಲಿ ಎಂದು ಪ್ರೀತಿಯಿಂದ ಉಲ್ಲೇಖಿಸಿದರೆ, ಇದನ್ನು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಮತ್ತು ಸಿಂಗಾಪುರ, ಮಲೇಷ್ಯಾ ಮುಂತಾದ ಏಷ್ಯಾದ ಇತರ ರಾಷ್ಟçಗಳಲ್ಲಿ ದೀಪಾವಳಿ (‘ದೀಪ್’ ಎಂದರೆ ಬೆಳಕು, ದೀಪ,‘ವಳಿ’ ಎಂದರೆ ರಚನೆ) ಎಂದು ಕರೆಯಲಾಗುತ್ತದೆ. ಆದಾಗ್ಯೂ, ಇದನ್ನು ಇದೇ ರೀತಿ ಹರುಷದಿಂದ ಆಚರಿಸಲಾಗುತ್ತದೆ.
ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ ಆಕಾಶದಲ್ಲಿ ಚಿಮ್ಮುವ ಬಾಣಬಿರುಸು ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು ಅದಷ್ಟೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಬೆಸುಗೆ, ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಮಿಳಿತಗೊಂಡಿರುವುದು ಕಂಡುಬರುತ್ತದೆ. ದೀಪಾವಳಿ ಹಬ್ಬದ ಮೊದಲಿಗೆ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವೂ ಇದೆ. ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷಿö್ಮಯೂ ಇರುತ್ತಾರೆಂಬುದು ನಂಬಿಕೆ. ಈ ನೀರಿನಿಂದ ಸ್ನಾನ ಮಾಡಿದರೆ ಆಯುರಾರೋಗ್ಯ ಆಯಸ್ಸು ವೃದ್ಧಿಸುವುದೆಂದೂ ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ. ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತç ಮಾಡಿದ್ದನು ಎಂದು ಹೇಳಲಾಗುತ್ತದೆ.
ಹಬ್ಬದ ಮೊದಲ ದಿನ ನರಕಚರ್ತುದಶಿಯಾಗಿದ್ದು, ನರಕ ಚತುರ್ದಶಿಯ ಕೇಂದ್ರ ಬಿಂದುವೇ ನರಕಾಸುರ. ಮಹಾವಿಷ್ಣು ತನ್ನ ವರಾಹಾವತಾರದಲ್ಲಿದ್ದಾಗ ಅವನ ಶರೀರದಿಂದ ಒಂದು ತೊಟ್ಟು ಬೆವರು ಭೂಮಿಗೆ ಬೀಳಲಾಗಿ ಭೂದೇವಿಯಲ್ಲಿ ನರಕಾಸುರ ಜನಿಸುತ್ತಾನೆ. ಇದರಿಂದಾಗಿ ಅವನಿಗೆ ಭೌಮಾಸುರ, ಭೂಮಿಪುತ್ರ ಎಂಬ ಹೆಸರುಗಳೂ ಉಂಟು. ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗ ನರಕಾಸುರನಿಗೆ ವೈಷ್ಣವಾಸ್ತçವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಬಲಿಷ್ಠನಾದ ನರಕಾಸುರ ಲೋಕಕಂಠಕನಾಗುತ್ತಾನೆ. ಇಂದ್ರ ಮತ್ತು ಅವನ ತಾಯಿ ಅಧಿತಿಯನ್ನೂ ಬಿಡದೆ ಕಾಡತೊಡಗಿ ದಾಗ ಇಂದ್ರ, ಶ್ರೀಕೃಷ್ಣನ ಮೊರೆ ಹೋಗುತ್ತಾನೆ. ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಾದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನಿಗೆ ಹೇಳಿದಾಗ, ಅಶ್ವಯುಜಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸುತ್ತಾನೆ. ಆ ದಿನವೇ ನರಕ ಚತುರ್ದಶಿ. ದುಷ್ಟ ಸಂಹಾರದ ಸಂಕೇತವಾಗಿ ಆ ದಿನ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯದ ನಗೆಯಲ್ಲಿ ಎಲ್ಲರೂ ಖುಷಿಪಡುತ್ತಾರೆ. ಹಾಗೆಯೇ ನರಕಾಸುರನನ್ನು ಕೊಂದು ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಶ್ರೀಕೃಷ್ಣ ಬಂಧಮುಕ್ತಗೊಳಿಸಿದ್ದ ರಿಂದಾಗಿ ಕನ್ಯಾಸೆರೆ ಬಿಡಿ ಸಿದ ಶ್ರೀಕೃಷ್ಣ ಸ್ವರೂಪಿ ಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ತಮ್ಮ ಮನೆಗೆ ಆಹ್ವಾನಿಸಿ ವಿಶೇಷ ವಾಗಿ ಆದರಿಸಿ ಉಪಚರಿಸುವ ಸಂಪ್ರದಾಯ ವನ್ನು ಕೂಡ ಕಾಣಬಹು ದಾಗಿದೆ.
ಅಮಾವಾಸ್ಯೆಯಂದು ಲಕ್ಷಿö್ಮ ಪೂಜೆ: ನರಕ ಚತುರ್ದಶಿಯ ಮಾರನೆಯ ದಿನ ದೀಪಾವಳಿ ಅಮಾವಾಸ್ಯೆಯಾಗಿದ್ದು, ಅಂದು ಲಕ್ಷಿö್ಮಪೂಜೆ ಮಾಡಲಾಗು ತ್ತದೆ. ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷಿö್ಮಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಸಮುದ್ರ ಮಂಥನದಿAದ ಲಕ್ಷಿö್ಮ ಉದಯಿಸಿದ ದಿನವೂ ಹೌದು. ಹೀಗಾಗಿ ಉತ್ತರ ಭಾರತೀಯರಿಗೆ ಹೆಚ್ಚಿನ ಸಂಭ್ರಮ. ಅದರಲ್ಲೂ ವ್ಯಾಪಾರಿಗಳಿಗೆ ದೀಪ ಲಕ್ಷಿö್ಮ ಬೆಳಗಿ ಧನಲಕ್ಷಿö್ಮ ಬರುವ ಭಾಗ್ಯದ ದಿನವೇ ಆಗಿದೆ. ಅವರಿಗೆ ವ್ಯಾಪಾರ ವಹಿವಾಟಿನ ವಾಣಿಜ್ಯದ ನೂತನ ವರ್ಷ ಉದಯಿಸುವುದೇ ಈ ದಿನ. ಹಾಗಾಗಿ ಅತ್ಯಂತ ಸಂತೋಷದಿAದ ಕಾರ್ತಿಕ ಮಾಸದ ಆರಂಭದ ಈ ಅಮಾವಾಸ್ಯೆಯ ಮಹಾರಾತ್ರಿಯಲ್ಲಿ ಮಹಾಲಕ್ಷಿö್ಮಗೆ ಮಹದಾನಂದದಿAದ ದೀಪಾರಾಧನೆಯೊಡನೆ ಲಕ್ಷಿö್ಮÃಪೂಜೆ ಯನ್ನು ಮಾಡುತ್ತಾರೆ.
ಬಲಿಪಾಡ್ಯಮಿ ಸಂಭ್ರಮ: ಹಬ್ಬದಲ್ಲಿ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಅಂದು ಬಲಿಚಕ್ರವರ್ತಿ ಭೂಲೋಕ ಸಂಚಾರ ಬರುತ್ತಾನೆ ಎಂಬ ನಂಬಿಕೆಯೂ ಇದೆ. ಅಂದು ಬಲೀಂದ್ರ ಪೂಜೆಯೂ ನಡೆಯುತ್ತದೆ.
ಗೋವರ್ಧನಗಿರಿ ಎತ್ತಿದ ದಿನ: ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿ ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನಪೂಜೆಯನ್ನು ಆಚರಿಸಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ.
-ಮೋಹನ್ ಎಸ್. ಸಿ.,
ಸೇಂಟ್‌ಆನ್ಸ್ ಪಿಜಿ ಅಧ್ಯಯನ ಕೇಂದ್ರ
ವೀರಾಜಪೇಟೆ.,
ಮೊ. ೭೬೧೯೪೯೪೯೧೫
ದೀಪಾವಳಿ ಸಡಗರ ಹಬ್ಬ. ಎಣ್ಣೆ, ನೀರು, ಹೊಸಬಟ್ಟೆ, ದೇವರ ಪೂಜೆ, ಪಟಾಕಿ, ಬಾಣ ಬಿರುಸು, ದೀಪಾಲಂಕಾರ, ಹೊಸ ಅಳಿಯ ನನ್ನು ಹಬ್ಬಕ್ಕೆ ಬರಮಾಡಿಕೊಂಡು ಆದರಿಸುವದು ದೀಪಾವಳಿಯ ವಿಶೇಷ. ಬೆಳೆ ಕೊಯ್ಲಿಗೆ ಬರುವ ಕಾಲ. ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಹಬ್ಬ ನಡೆಯುವುದು. ಉತ್ತರ ಭಾರತದಲ್ಲಿ ಇದನ್ನು ದೀವಾಳಿ ಎನ್ನುತ್ತಾರೆ. ದೀಪಾವಳಿಗೆ ಎರಡು ದಿನ ಮೊದಲು ನೀರು ತುಂಬುವ ಹಬ್ಬ. ದೀಪಾವಳಿಯು ಕತ್ತಲೆ ಯನ್ನು ಹೋಗಲಾಡಿಸುವ ಹಬ್ಬ. ಮನೆ, ಮನದ ಕತ್ತಲೆ ಯನ್ನು ನಿವಾರಿಸಿ ಬೆಳಕನ್ನು ಉಂಟುಮಾಡುವ ಹಬ್ಬ. ದೀಪಾವಳಿ ಹಬ್ಬವನ್ನು ನರಕಚತುರ್ದಶಿ ಯಿಂದ ಪ್ರಾರಂಭಿಸುತ್ತಾರೆ.
ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನ, ಶ್ರೀಮನ್ನಾರಾಯಣನು ವರಹಾವತಾರ ವನ್ನೆತ್ತಿ ಭೂಮಿಯನ್ನು ಉದ್ಧರಿಸಿದ ದಿನ. ನರಕಾಸುರನನ್ನು ಕೊಂದಿದ್ದು ಅಶ್ವಯುಜ ಕೃಷ್ಣ ಚತುರ್ದಶಿಯ ಕಗ್ಗತ್ತ್ತಲಿನಲ್ಲಿ. ನರಕಾಸುರನ ತಾಯಿಯ ಅಪ್ಪಣೆಯ ಮೇರೆಗೆ ನರಕಾಸುರ ನನ್ನು ಎಲ್ಲರೂ ಪೂಜಿಸುವ, ನೆನಪಿಡುವ ರೀತಿ ಯಲ್ಲಿ ಕೃಷ್ಣನು ಈ ಹಬ್ಬವನ್ನು ಸ್ಥಾಯಿಗೊಳಿಸು ತ್ತಾನೆ. ಆ ದಿನದ ಸವಿನೆನಪು ನರಕ ಚತುರ್ದಶಿ. ಇದಕ್ಕಾಗಿ ಅಭ್ಯಂಜನ, ಯಮತರ್ಪಣ ಮೊದಲಾದವುಗಳನ್ನು ಪುರಾಣಗಳು ವಿಧಿಸಿವೆ.
ಲಕ್ಷಿö್ಮ ಎಂದರೆ ಧನಾಧಿದೇವತೆ ಎಂಬ ಪ್ರತೀತಿಯಿದೆ. ಲಕ್ಷಿö್ಮ ಕೇವಲ ‘ಧನಲಕ್ಷಿö್ಮ’ ಮಾತ್ರವಲ್ಲ ‘ಶ್ರೀಂ’ ಮಂತ್ರ ಬೀಜಾಕ್ಷರದಲ್ಲಿನ ‘ಶ’ಕಾರವು ಪರಬ್ರಹ್ಮದ ‘ಸತ್’ ಸ್ವರೂಪವನ್ನೂ ‘ರ’ಕಾರವೂ ‘ಚಿತ್’ ಸ್ವರೂಪವನ್ನೂ ‘ಈ’ಕಾರವು ಆನಂದ ಸ್ವರೂಪವನ್ನೂ ‘ಂ’ಯು ಇಡೀ ವಿಶ್ವವನ್ನೂ ಸಂಕೇತವಾಗಿ ಪಡೆದಿವೆ. ಆದ್ದರಿಂದ ಲಕ್ಷಿö್ಮ ಸಚ್ಚಿದಾನಂದ ಶಕ್ತಿಯ ವಿಶ್ವಮಯಿ. ಈಕೆ ಶ್ರೇಯಸ್ಸುಗಳಿಗೆ ಕಾರಣಳು. ಲಕ್ಷಿö್ಮ ಕಟಾಕ್ಷ ಜ್ಯೋತಿ ಸ್ವರೂಪಕ್ಕೆ ಸಮಾನ, ಮಹಾಲಕ್ಷಿö್ಮಯು ಜ್ಯೋತಿ ಸ್ವರೂಪಿಣಿ, ಸೂರ್ಯ, ಚಂದ್ರ, ಅಗ್ನಿ, ವಿದ್ಯುತ್, ನಕ್ಷತ್ರಗಳು ಮೊದಲಾದ ಎಲ್ಲಾ ಜ್ಯೋತಿರ್ವಸ್ತುಗಳಲ್ಲಿಯೂ ವಿರಾಜಮಾನಳಾಗಿದ್ದಾಳೆ. ಕತ್ತಲನ್ನು ತೊಡೆದು ಬೆಳಕನ್ನು ಕಾಣುವುದು. ಸೃಷ್ಟಿ ವಿಕಾಸದ ರಹಸ್ಯವು ಹೌದು. ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮ ಮನಸ್ಸು ಊರ್ಧ್ವಾಮುಖಿಯಾಗಬೇಕು. ಹೀಗಾಗಿ ದೀಪಾವಳಿಯ ಆಚರಣೆಯಲ್ಲಿ ಲಕ್ಷಿö್ಮ ಪೂಜೆಗೆ ಮಹತ್ವವಿದೆ. ಬಲಿಪಾಡ್ಯಮಿ. ಕಾರ್ತಿಕ ಶುದ್ಧ ಬಲಿ ಪಾಡ್ಯಮಿಯ ದಿನ ಮಹಾವಿಷ್ಣುವು ವಾಮನನ ಅವತಾರ ತಾಳಿ, ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ಅಟ್ಟಿದನೆಂಬ ಪೌರಾಣಿಕ ಕಥೆ ಸುಪ್ರಸಿದ್ಧ. ಬಲಿಯ ನೆನಪಿಗಾಗಿ ಹಿಟ್ಟಿನ ಇಲ್ಲವೇ ಗೋಮಯದ ಬಲಿಯ ಮೂರ್ತಿ ಮಾಡಿ, ಪೂಜಿಸುವರು.
ಉತ್ತರಭಾರತದವರಿಗೆ ದೀಪಾವಳಿ, ವರ್ಷದ ಆದಿಯ ಅತಿ ಶ್ರೇಷ್ಠ ಹಬ್ಬ. ಅಲ್ಲಿ ಬಳಕೆಯಲ್ಲಿರುವ ‘ವಿಕ್ರಮ’ ಸಂವತ್ಸರ ಕಾರ್ತೀಕ ಪಾಡ್ಯದಿಂದ ಆರಂಭವಾಗುತ್ತದೆ. ಹೀಗಾಗಿ ಅವರಿಗೆ ಬಲಿಪಾಡ್ಯ ವರ್ಷದ ಆರಂಭದ ದಿನ. ಲಂಕೆಯಿAದ ಹಿಂತಿರುಗಿದ ಶ್ರೀರಾಮನ ಪಟ್ಟಾಭಿಷೇಕಗೊಂಡ ದಿನ. ಅಯೋಧ್ಯೆಯ ಜನ ಆನಂದದಿAದ ದೀಪಗಳನ್ನು ಬೆಳಗಿಸಿ ಶ್ರೀರಾಮನನ್ನು ಅಂದು ಸ್ವಾಗತಿಸಿದರಂತೆ, ಅಂತೆಯೇ ಪಾಂಡವರು ಅಜ್ಞಾತವಾಸ ಮುಗಿಸಿ, ಪ್ರಕಟವಾದ ದಿನ. ಭಾರತ ದೇಶದ ಬಲಿಷ್ಠ ಧರ್ಮರಾಜನಾದ ವಿಕ್ರಮನು ರಾಜಾಭಿಷೇಕ ಗೊಂಡ ದಿನ. ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಹಿಡಿದೆತ್ತಿದ ದಿನ ಎಂದೂ ಹೇಳಲಾಗುವುದು. ಅಂಧು ಗೋ ಪೂಜೆ ಯನ್ನು ಮಾಡುವರು.
ಐದು ದಿನ ಹಬ್ಬ ಮಾಡುವರು, ಮಾರನೆಯ ದಿನ ‘ಬಂಧು ದ್ವಿತೀಯ’ ಆಚರಿಸುತ್ತಾರೆ. ಅಂದು ಅಣ್ಣ-ತಮ್ಮಂದಿರು, ಸಹೋದರಿಯರ ಮನೆಗೆ ಊಟಕ್ಕೆ ಹೋಗುತ್ತಾರೆ. ಐದನೇಯ ದಿನ ‘ಭಗನೀ ತೃತೀಯ’ ಸಹೋದರಿಯರನ್ನು ಅಣ್ಣ-ತಮ್ಮಂದಿರು ಹಬ್ಬದ ಊಟಕ್ಕೆ ಕರೆದು ಉಡುಗೊರೆ ಕೊಡುತ್ತಾರೆ.
ಬಂಗಾಳದಲ್ಲಿ ದೀಪಾವಳಿಯಲ್ಲಿ ಕಾಳಿ ಪೂಜೆ ನಡೆಯುವುದು. ಜೈನ ಧರ್ಮದಲ್ಲಿ ಮಹಾವೀರನು ನಿರ್ವಾಣ ಸ್ಥಿತಿಯನ್ನು ತಲಪಿದ ದಿನವಾಗಿ ದೀಪಾವಳಿಯನ್ನು ಆಚರಿಸಲಾಗುವುದು. ದೀಪಾವಳಿಯ ದಿನ ತಾನು ಸೆರೆಯಲ್ಲಿಟ್ಟಿದ್ದ ಗುರು ಗೋವಿಂದರನ್ನು ಜಹಾಂಗೀರ್ ಬಿಡುಗಡೆ ಮಾಡಿದ. ಅಂದು ಸಿಖ್ಖರು ಅಮೃತಸರದಲ್ಲಿರುವ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ, ಕೊಳದಲ್ಲಿ ಸ್ನಾನ ಮಾಡುವರು.
ದೀಪಾವಳಿಯನ್ನು ನಮ್ಮ ದೇಶದಲ್ಲಿ ಬೇರೆ, ಬೇರೆ ಕಡೆ ದಾಂತೆರಾಸ್, ಕಾಳಿಪೂಜೆ, ನರಕಚತುರ್ದಶಿ, ಗೋವರ್ಧನ ಪೂಜಾ, ಬಾಯಿದೂಜ್ ಎಂದು ವಿವಿಧ ರೀತಿಯಲ್ಲಿ ಆಚರಿಸುವರು.
ದೀಪಾವಳಿಯನ್ನು ಉತ್ತರ ಕರ್ನಾಟಕದಲ್ಲಿ ಹಟ್ಟಿ ಹಬ್ಬ ಎಂದು ಕರೆಯುತ್ತಾರೆ. ಈ ಹಬ್ಬದಲ್ಲಿ ಸುಗ್ಗಿಯನ್ನು ಸ್ವಾಗತಿಸಲು, ಸಂಭ್ರಮ ಸಿದ್ಧತೆ ವಿಜೃಂಭಣೆಯಿAದ ನಡೆಯುತ್ತದೆ. ದೀಪಾವಳಿ ಎಲ್ಲರ ಬಾಳಿನಲ್ಲೂ ಕತ್ತಲನ್ನು ಸರಿಸಿ ಬೆಳಕಿನೆಡೆ ಕೊಂಡೊಯ್ಯಲಿ, ಬೆಳಕು ಪ್ರಖರವಾಗಲಿ.
? ಹರೀಶ್ ಸರಳಾಯ,
ಮಡಿಕೇರಿ.