ವೀರಾಜಪೇಟೆ, ಅ. ೨೨: ಸರಕಾರದ ವಿವಿಧ ಸವಲತ್ತುಗಳನ್ನು ಜನತೆಗೆ ತಲುಪಿಸುವಲ್ಲಿ ಅಂಗನವಾಡಿಯ ಪಾತ್ರ ಪ್ರಮುಖವಾಗಿದೆ. ಮಾತೃವಂದನ, ಆಹಾರ ಪೋಷಣ್ ಜೊತೆಗೆ ಬಾಣಂತಿಯರಿಗೆ ಕಿಟ್ ಇತ್ಯಾದಿ ಸೌಲಭ್ಯ ಇಂದು ಅಂಗನವಾಡಿ ಮೂಲಕ ವಿತರಿಸಲಾಗುತ್ತಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಗಾಂಧಿನಗರದ ಅಂಗನವಾಡಿಯಲ್ಲಿ ಶಾಸಕ ಬೋಪಯ್ಯ ಅವರು ಬಾಣಂತಿಯರಿಗೆ ಕಿಟ್‌ಅನ್ನು ಸಾಂಕೇತಿಕವಾಗಿ ವಿತರಿಸಿದ ಬಳಿಕ ಮಾತನಾಡಿ, ಬಾಣಂತಿಯರ ಕಿಟ್ ವಿತರಣೆ ಸ್ಥಗಿತವಾಗಿದ್ದು ಇತ್ತೀಚೆಗೆ ವಿಧಾನ ಸಭಾ ಕಲಾಪದಲ್ಲಿ ಇದು ಪ್ರಸ್ತಾಪವಾದ ಬಳಿಕ ಮಲೆನಾಡÀÄ ಜಿಲ್ಲೆಗಳಿಗೆ ವಿತರಣೆ ಆರಂಭವಾಗಿದೆ ಎಂದರು.

ವಿಧಾನಸಭಾ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಸರಕಾರದ ಸವಲತ್ತು-ಸೌಲಭ್ಯಗಳನ್ನು ಅಗತ್ಯ ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಧಾನಿ ಮೋದಿ ಅವರ ಕನಸಿನಂತೆ ವಸತಿ ಯೋಜನೆ, ಶುದ್ಧ ಕುಡಿಯುವ ನೀರಿನ ಯೋಜನೆಗಳು ಇಂದು ಪ್ರಗತಿಯಲ್ಲಿದೆ. ಈ ಮೂಲಕ ರಾಜ್ಯ ಕೇಂದ್ರ ಸರಕಾರ ಬಡ ಜನರ ಅಭಿವೃದ್ಧಿಗೆ ಉತ್ತಮ ಯೋಜನೆ ರೂಪಿಸಿ ಕಾರ್ಯಪ್ರವೃತವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷೆ ಸುಶ್ಮಿತಾ ವಹಿಸಿದ್ದರು. ಸಭೆಯಲ್ಲಿ ತಾಲೂಕು ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆಯ ಅಧಿಕಾರಿ ರಾಜೇಶ್ ಹಾಗೂ ಸಹಾಯಕ ಅಧಿಕಾರಿ ರೀಟಾ ಹಾಗೂ ಸ್ಥಳೀಯ ಸದಸ್ಯೆ ಜೂನಾ ಸುನೀತಾ ಹಾಜರಿದ್ದರು.