ನಾಪೋಕ್ಲು, ಅ. ೧೭: ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ೨೬ನೇ ವರ್ಷದ ಕಾವೇರಿ ರಥಯಾತ್ರೆ ತಲಕಾವೇರಿಗೆ ತೆರಳಿತು. ಕಾವೇರಿ ಮಾತೆಯ ಪ್ರತಿಮೆಯನ್ನು ಹೊತ್ತು ಭವ್ಯವಾದ ಪುಷ್ಪಾಲಂಕೃತ ಮೆರವಣಿಗೆಯು ಪಾಲೂರಿನ ಪಾಲೂರಪ್ಪ ದೇವಾಲಯದಿಂದ ತಲಕಾವೇರಿಗೆ ತೆರಳಿ ತೀರ್ಥೋದ್ಭವದ ಬಳಿಕ ವಿವಿಧ ಸ್ಥಳಗಳಲ್ಲಿ ತೀರ್ಥ ವಿತರಿಸಿ ಪಾಲೂರಿನ ಸತ್ಯಹರಿಶ್ಚಂದ್ರ ದೇವಾಲಯದ ಕಾವೇರಿ ನದಿಯಲ್ಲಿ ತಾಯಿ ಕಾವೇರಿ ಮಾತೆಯ ಕಳಶ ವಿಸರ್ಜನೆಯೊಂದಿಗೆ ಅಂತ್ಯಗೊಳ್ಳಲಿದೆ ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣಪ್ಪ ಹೇಳಿದರು.

ಬೆಳಿಗ್ಗೆ ಆರು ಗಂಟೆಗೆ ಭಾಗಮಂಡಲದಿAದ ರಥಯಾತ್ರೆ ಆರಂಭಗೊಳ್ಳಲಿದ್ದು ಚೇರಂಗಾಲ, ಅಯ್ಯಂಗೇರಿ ಪುಲಿಕೋಟು ಪೇರೂರು ಬಲ್ಲಮಾವಟಿ,, ಚೋನಕೆರೆ ಮೂಲಕ ಮಧ್ಯಾಹ್ನ ೧ ಗಂಟೆಗೆ ನಾಪೋಕ್ಲು ತಲುಪಲಿದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮಯ್ಯು ದೇವಯ್ಯ, ಪದಾಧಿಕಾರಿಗಳಾದ ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟಂಡ ಸುಮಿ ದೇವಯ್ಯ ಇದ್ದರು.