ಮಡಿಕೇರಿ, ಅ. ೧೭: ರೋಟರಿ ಮಡಿಕೇರಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ರೋಟರಿ ಚದುರಂಗ ಪಂದ್ಯಾವಳಿ-೨೦೨೨’ಗೆ ಇಂದು ಚಾಲನೆ ನೀಡಲಾಯಿತು. ಮಡಿಕೇರಿಯ ಪ.ಪೂ. ಕಾಲೇಜು ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಉಪಾಧ್ಯಕ್ಷ ನಾಗೇಂದ್ರ ಚಾಲನೆ ನೀಡಿದರು. ಅತಿಥಿಗಳಾಗಿ ರಾಜ್ಯ ತರಬೇತುದಾರ ಶ್ರೀಪಾದ್, ರೋಟರಿ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ, ಕಾರ್ಯದರ್ಶಿ ಸುದಯ್ ನಾಣಯ್ಯ, ರೋಟರಿಯ ಸಿ.ಟಿ.ಮಂದಣ್ಣ, ಟಿ.ಕೆ.ಪೊನ್ನಣ್ಣ ಇತರರು ಪಾಲ್ಗೊಂಡಿದ್ದರು.
ಈiಜe ತರಬೇತುದಾರರು ಮತ್ತು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ನ ಜಂಟಿ ಕಾರ್ಯದರ್ಶಿ ಶ್ರೀಪಾದ್ ಕೆ. ವಿ. ಯವರಿಂದ ತಾ. ೧೪ ರಂದು ತರಬೇತಿ ಕಾರ್ಯಗಾರವೂ ನಡೆಯಿತು. ತಾ. ೧೫ ರಂದು ೧೪೦ಕ್ಕೂ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಟ್ರೋಫಿ ಹಾಗೂ ನಗದು ಪ್ರಥಮ ರೂ. ೭೫೦೦, ೫೦೦೦. ದ್ವಿತೀಯ ೩೦೦೦, ತೃತೀಯ ೨೫೦೦ ನಾಲ್ಕನೇ ಮತ್ತು ಐದನೇ ಸ್ಥಾನಕ್ಕೆ ೨೦೦೦ ದಂತೆ ನೀಡ ಲಾಯಿತು. ಅಲ್ಲದೆ, ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ (ಸರ್ಟಿಫಿಕೇಟ್) ನೀಡಲಾಯಿತು.
ವಿಜೇತರು (೧೦ ವರ್ಷಕ್ಕಿಂತ ಕೆಳಗಿನವರು) : ಸಾತ್ವಿಕ್ ವಿಶ್ವನಾಥ್, ಅರುಣ್ ಅವನೀಶ್, ಶ್ರೇಯಸ್ ಆರ್., ಸಾನ್ಮೇ ಎನ್., ಚಿನ್ಮಿತ್ ಕೆ. ಎಸ್.
೧೬ ವರ್ಷಕ್ಕಿಂತ ಕೆಳಗಿನ ವಿಭಾಗದ ವಿಜೇತರು : ಆಕಾಶ್ ಎಂ. ಹೆಚ್., ಯಶರಾಜ್, ಶಶಾಂಕ್ ನಾಣಯ್ಯ ಎಂ. ಡಿ., ಸ್ಪರ್ಶಾ ರೈ, ಪ್ರಧಾನ್ ಮುತ್ತಣ್ಣ.
೧೬ ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದ ವಿಜೇತರು : ಪ್ರಜ್ವಲ್ ಕೆ. ಎಂ., ಪಿ. ವಿ. ಶ್ರೀನಿವಾಸ್, ಅಜಿತ್ ಎಂ. ಪಿ., ರಜತ್ ಗುರುರಾಜ್, ಸುನಿಲ್ ಬಿ. ಎ.