ನಾಪೋಕ್ಲು, ಅ. ೧೭: ಸ್ಥಳಿಯ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಳಕೇರಿ-ಕೋಕೇರಿ ಸಂಪರ್ಕ ರಸ್ತೆಯು ಹೊಂಡಗುAಡಗಳಿAದ ಕೂಡಿದ್ದು ಸಂಪೂರ್ಣ ಹದಗೆಟ್ಟು ಜನಸಾಮಾನ್ಯರಿಗೆ ನಡೆದಾಡಲು ತೊಂದರೆ ಆಗುತ್ತಿದೆ ಎಂದು ಅಸಮಾಧಾನಗೊಂಡ ಗ್ರಾಮಸ್ಥರು ಒಟ್ಟು ಸೇರಿ ಹಣ ಸಂಗ್ರಹಿಸಿ ಭಾನುವಾರ ಶ್ರಮದಾನ ಮೂಲಕ ಹೊಂಡಗಳಿಗೆ ಕಲ್ಲು ತುಂಬಿ ಎಕ್ಸ್ಕವೇಟರ್ ಮೂಲಕ ದುರಸ್ತಿಪಡಿಸಿದರು.
ಕೊಳಕೇರಿ ಗ್ರಾಮಸ್ಥ ಎಂ.ಎ, ಮೋಯಿದು ಮಾತನಾಡಿ, ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಜನಪ್ರತಿನಿಧಿಗಳು ಸ್ಪಂದಿಸಿಲ್ಲ; ರಸ್ತೆಯ ಮರುಡಾಂಬರೀಕರಣ ಮಾಡದಿದ್ದಲ್ಲಿ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ ಕೋಕೇರಿ-ಕೊಳಕೇರಿ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಮಳೆಗಾಲದಲ್ಲಿ ಗುಂಡಿಬಿದ್ದ ರಸ್ತೆಗಳಲ್ಲಿ ಕೆಸರುನೀರು ತುಂಬಿಕೊAಡು ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ರಸ್ತೆ ದುರವಸ್ತೆಯಿಂದಾಗಿ ತನ್ನ ಸಂಚಾರ ಸ್ಥಗಿತಗೊಳಿಸಿ ಶಾಲಾ ವಿದ್ಯಾರ್ಥಿಗಳು ತುಂಬಾ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ಕಂಡಿಲ್ಲ. ಕೂಡಲೇ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಕುಲ್ಲೇಟಿರ ಹೇಮಾ ಅರುಣ್, ಗಂಗಮ್ಮ, ಅಶ್ರಫ್, ಅಮೀನಾ ಹಾಗೂ ಚೇನಂಡ ಗಿರೀಶ್, ನಂದ, ಸಂಪತ್, ಕಾನಂಡ ಅಶೋಕ್, ಪೊನ್ನಚಂಡ ಮಧು, ಅಚ್ಚು, ಇಬ್ರಾಹಿಂ, ಚೆಪ್ಪು, ಇನ್ನಿತರ ಗ್ರಾಮಸ್ಥರು ಹಾಜರಿದ್ದರು.