ಮಡಿಕೇರಿ, ಅ. ೧೭: ೨೦೨೨-೨೩ನೇ ಸಾಲಿನ ಬಿತ್ತನೆ ಕಾಫಿ ಬೀಜಕ್ಕೆ ಆಸಕ್ತ ಕಾಫಿ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿತ್ತನೆ ಬೀಜಕ್ಕೆ ಅರ್ಜಿ ಸಲ್ಲಿಸಲಿಚ್ಛಿಸುವ ಆಸಕ್ತ ಕಾಫಿ ಬೆಳೆಗಾರರು ಮಂಡಳಿಯ ಕಚೇರಿಯಲ್ಲಿ ದೊರೆಯುವ ಅರ್ಜಿಯನ್ನು ಭರ್ತಿ ಮಾಡಿ ನೋಂದಾಯಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೧೧ ನವೆಂಬರ್ ೨೦೨೨. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಲು ಗೋಣಿಕೊಪ್ಪ ಕಾಫಿ ಮಂಡಳಿ ಪ್ರಕಟಣೆ ತಿಳಿಸಿದೆ.