ಗೋಣಿಕೊಪ್ಪಲು, ಅ.೧೭: ಗ್ರಾಹಕರ ಸೋಗಿನಲ್ಲಿ ಬಟ್ಟೆ ಅಂಗಡಿಗೆ ಆಗಮಿಸಿದ ಯುವಕನೋರ್ವ ಅಂಗಡಿಯಲ್ಲಿ ಯಾರು ಇಲ್ಲದಿರು ವುದನ್ನು ಗಮನಿಸಿ, ಕ್ಯಾಶ್ಬಾಕ್ಸ್ಗೆ ಕೈ ಹಾಕಿ ಹಣ ಲಪಟಾಯಿಸಿದ ಘಟನೆ ನಡೆದಿದೆ.
ಗೋಣಿಕೊಪ್ಪಲುವಿನ ‘ಫ್ಯಾಷನ್ ಪಾರ್ಕ್’ ಎಂಬ ಬಟ್ಟೆ ಅಂಗಡಿಗೆ ತಾ. ೧೭ ರ ಸಂಜೆ ೫.೫೦ ಸುಮಾರಿಗೆ ಆಗಮಿಸಿದ ಯುವಕ ಸಮೀಪದ ಮೊಬೈಲ್ ಅಂಗಡಿ ತೆರಳಿ ನಂತರ ಪಕ್ಕದ ಬಟ್ಟೆ ಅಂಗಡಿಯ ಒಳಗೆ ನುಗ್ಗಿದ್ದಾನೆ.
ಅಂಗಡಿ ಮಾಲೀಕರು ಅಂಗಡಿಯ ಹೊರ ಭಾಗದಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಅಂಗಡಿಗೆ ನುಗ್ಗಿದ ಯುವಕ ಅಂಗಡಿಯ ಒಳಭಾಗದಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಕ್ಯಾಶ್ಬಾಕ್ಸ್ಗೆ ಕೈ ಹಾಕಿ ಸುಮಾರು ೫,೫೦೦ ನಗದಿನೊಂದಿಗೆ ಪರಾರಿಯಾಗಿದ್ದಾನೆ. ನಗರದ ಹೃದಯ ಭಾಗದಲ್ಲಿ ಈ ಘಟನೆ ನಡೆದಿದೆ. ಕದ್ದ ಹಣದೊಂದಿಗೆ ಯುವಕ ಸಮೀಪದ ಮಾರುಕಟ್ಟೆ ಬಳಿ ತೆರಳಿ ಹೊಸ ಶರ್ಟ್ ಖರೀದಿ ಮಾಡಿ ಅದನ್ನು ಧರಿಸಿ ನಂತರ ಅಲ್ಲಿಂದ ತೆರಳಿದ್ದಾನೆ.