ಸಂಪಾಜೆ, ಅ. ೧೬: ಲಯನ್ಸ್ ವಲಯಾಧ್ಯಕ್ಷ ಗಂಗಾಧರ ರೈ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಪ್ರಾಂತ್ಯ ೮, ವಲಯ ೧ರ ಅಧ್ಯಕ್ಷ ಲಯನ್ ಗಂಗಾಧರ ರೈ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ವಿಶೇಷಚೇತನ ಮಹಿಳೆ ಆಸ್ಯಮ್ಮಳಿಗೆ ವ್ಹೀಲ್ ಚೇರ್, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವ ಸಂಪಾಜೆ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕ್ರೀಡಾ ಜರ್ಸಿಗಳ ವಿತರಣೆ ಹಾಗೂ ಸುಳ್ಯ ಎಂ.ಬಿ. ಫೌಂಡೇಶನ್ ಸಾಂದೀಪ ವಿಶೇಷಚೇತನ ಮಕ್ಕಳ ಶಾಲೆಗೆ ತಿಂಗಳಿಗೆ ತಲಾ ರೂ. ೫೦೦೦/- ಧನ ಸಹಾಯದ ಚೆಕ್‌ನ್ನು ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಸಂಪಾಜೆ ಲಯನ್ ಕ್ಲಬ್‌ನ ಅಧ್ಯಕ್ಷೆ ನಳಿನಿ ಕಿಶೋರ್ ಕುಮಾರ್, ಲಿಜೋ ಜೋಸ್, ಗುತ್ತಿಗಾರು, ಸುಳ್ಯ ಕ್ಲಬ್‌ನ ಅಧ್ಯಕ್ಷರು, ಸಂಪಾಜೆ ಕ್ಲಬ್‌ನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾಂತಿಯ ಅಧ್ಯಕ್ಷೆ ಸಂದ್ಯಾ ಸಚಿತ್ ರೈ, ಲಯನ್ಸ್ ಸುಳ್ಯ, ಕಡಬ, ಗುತ್ತಿಗಾರು, ಪಂಜ ಹಾಗೂ ಸಂಪಾಜೆ ಲಯನ್ಸ್ ಕ್ಲಬ್‌ನ ಸದಸ್ಯರು ಭಾಗವಹಿಸಿದ್ದರು.