ಗೋಣಿಕೊಪ್ಪ ವರದಿ, ಅ. ೧೬: ಬೆಳೆಗಾರರಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲು ಮತ್ತಷ್ಟು ಹೋರಾಟ ಅಗತ್ಯವಿದೆ ಎಂದು ಸತ್ಯಸಾಯಿ ಟ್ರಸ್ಟ್ ಅಧ್ಯಕ್ಷ ಚೆಪ್ಪುಡೀರ ಪ್ರಥ್ವಿ ಪೂಣಚ್ಚ ಹೇಳಿದರು.

ಸಾರ್ವಜನಿಕ ಹಿತರಕ್ಷಣಾ ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ರೈತರಿಗೆ ೧೦ ಹೆಚ್‌ಪಿ ವಿದ್ಯುತ್ ಉಚಿತ ನೀಡುವ ವಿಚಾರದಲ್ಲಿ ಮತ್ತಷ್ಟು ನಮ್ಮ ಕೂಗು ಹೊರಬರಬೇಕಿದೆ. ಸರ್ಕಾರ ಉಚಿತ ವಿದ್ಯುತ್ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ೨೨ ವರ್ಷಗಳಿಂದ ನಿರಂತರವಾಗಿ ಸಮಿತಿ ಹೋರಾಟ ನಡೆಸುತ್ತಿದೆ. ಸಾರ್ವಜನಿಕರ ಪರವಾಗಿ ನಿರಂತರವಾಗಿ ತೊಡಗಿಕೊಳ್ಳ ಲಾಗುವುದು ಎಂದರು.

ದಾನಿ ಕುಪ್ಪಣಮಾಡ ಚೋಂದಮ್ಮ ಗಣಪತಿ ಕಚೇರಿಗೆ ಪೀಠೋಪಕರಣ ಹಸ್ತಾಂತರ ಮಾಡಿ ಮಾತನಾಡಿದರು. ಕಾರ್ಯಾಧ್ಯಕ್ಷ ಬಾಚೀರ ಕಾರ್ಯಪ್ಪ, ಉಪಾಧ್ಯಕ್ಷ ನಾಟೋಳಂಡ ಚರ್ಮಣ, ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಖಜಾಂಚಿ ಅಜ್ಜಿಕುಟ್ಟೀರ ಎನ್. ಸುಬ್ರಮಣಿ, ಸಲಹೆಗಾರ ಚೊಟ್ಟೆಯಂಡಮಾಡ ಎನ್. ವಿಶ್ವನಾಥ್, ಸಂ. ಕಾರ್ಯದರ್ಶಿ ಕಾಳಿಮಾಡ ಕೆ. ಬೆಳ್ಯಪ್ಪ, ಸಹ ಕಾರ್ಯದರ್ಶಿ ಕೋಳೇರ ನರೇಂದ್ರ ಇದ್ದರು.