ಸುAಟಿಕೊಪ್ಪ, ಅ. ೧೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರುಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿ ರುವುದು ಶ್ಲಾಘನೀಯವಾದುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಂಟಿಕೊಪ್ಪ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಕಾನ್‌ಬೈಲ್ ರಾಮ ಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳ ಶ್ರೀ ವಿರೇಂದ್ರ ಹೆಗಡೆಯವರ ದೂರದೃಷ್ಟಿಯಿಂದ ಆರಂಭವಾದ ಈ ಸಂಘ ಬಲಿಷ್ಠವಾಗಿ ಬೆಳೆದಿದ್ದು, ಕೊಡಗಿನಲ್ಲಿ ಸಂಘದ ಮೂಲಕ ಫಲಾನುಭವಿಗಳು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಅದೇ ರೀತಿ ಸರಕಾರದಿಂದ ನೀಡುತ್ತಿರುವ ಈಶ್ರಮ್ ಕಾರ್ಡು, ಆರೋಗ್ಯ ಕಾರ್ಡ್ ಸೌಲಭ್ಯ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಧಾರ್ಮಿಕ ಉಪನ್ಯಾಸ ಮಾಡಿದ ವೇದಾಂತ ಉಪನ್ಯಾಸಕರಾದ ಶಶಂಕಾ ಹತ್ತವಾರ್ ಯಾರಿಗೂ ತೊಂದರೆ ನೀಡದೆ ಒಳ್ಳೆಯ ಮನಸ್ಸಿನಿಂದ ಬಾಳ್ವೆ ನಡೆಸುವುದನ್ನು ಎಲ್ಲಾ ಧರ್ಮ ಸಾರುತ್ತದೆ ನಾವು ನಡೆಸುವ ಉತ್ತಮ ಜೀವನ ಕ್ರಮವೇ ಧರ್ಮವಾಗಿದೆ ಎಂದರು.
ಸುಂಟಿಕೊಪ್ಪ ವಲಯದ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಗೆ ೮ ಒಕ್ಕೂಟಗಳು ಸಕಾಲದಲ್ಲಿ ಕಂತು ಪಾವತಿಸಿ ಉತ್ತಮ ಒಕ್ಕೂಟವೆಂದು ಪರಿಗಣಿಸಿದಕ್ಕೆ ಸಿಡ್ಡಿ ಸಾಲ ಮರುಪಾವತಿ ಪತ್ರ ನೀಡಿ ಗೌರವಿಸಲಾಯಿತು.
ಯೋಜನಾಧಿಕಾರಿ ರೋಹಿತ್, ನಿಸರ್ಗ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಕೃಷ್ಣಭಟ್, ಡಾ. ಶಶಿಕಾಂತ್ ರೈ ಮಾತನಾಡಿದರು.
ಅಧ್ಯಕ್ಷತೆಯನ್ನು ಶ್ರೀ ರಾಮ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಜಿ. ನರೇಂದ್ರ ವಹಿಸಿದ್ದರು.
ಸಮಾಜ ಸೇವಕರಾದ ಪರಮೇಶ್ವರ ಗಜಾನನ ಹೆಗಡೆ, ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಜಿ. ರಮೇಶ ಸುಜ್ಞಾನ ನಿಧಿ ಶಿಷ್ಯ ವೇತನ ವಿತರಿಸಿದರು.
ಕಾನ್‌ಬೈಲ್ ಒಕ್ಕೂಟದ ಅಧ್ಯಕ್ಷರಾದ ಖತ್ತೀಜ ಉಪಸ್ಥಿತ ರಿದ್ದರು. ಇದೇ ಸಂದರ್ಭದಲ್ಲಿ ವಲಂiÀiದಲ್ಲಿ ಉತ್ತಮ ಸಾಧನೆ ಮಾಡಿದ ೮ ಒಕ್ಕೂಟದ ವಿವಿಧ ಸ್ವಸಹಾಯ ಸಂಘಗಳಾದ ಓಂಶಾAತಿ ಶಾಂತಗೀರಿ ಒಕ್ಕೂಟ, ಕಾನ್‌ಬೈಲ್ ಒಕ್ಕೂಟ ಭೂಮಿಕ, ಬಸವೇಶ್ವರ ಕಾಂಡನಕೊಲ್ಲಿ, ಕೆದಕಲ್ ಸಂಜೀವಿನಿ, ಸುಂಟಿಕೊಪ್ಪ ಶಿವಶಂಕರಿ, ಗದ್ದೆಹಳÀ್ಳ ಕಾವೇರಿ, ಶ್ರೀ ರಕ್ಷಾ ಮಾದಾಪುರ ಗುಂಡುಗುಟ್ಟಿ ಮಾತೃಶ್ರೀ ನವಜೀವನ ಸಮಿತಿಯವರಿಗೆ ಬಹುಮಾನವನ್ನು ವಿತರಿಸಲಾಯಿತು.
ಮೊದಲಿಗೆ ಕಾನ್‌ಬೈಲ್ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಯಶೋಧ ಬಸವರಾಜ್ ಸ್ವಾಗತಿಸಿ, ಪುಷ್ಪಾವತಿ ನಿರೂಪಿಸಿ, ಚಿತ್ರಾ ಸುರೇಶ್ ವಂದಿಸಿದರು.