ಸುಂಟಿಕೊಪ್ಪ, ಅ. ೧೬: ವಿಶ್ವ ಮಾನವ ಆರೋಗ್ಯ ದಿನಾಚರಣೆಯ ಅಂಗವಾಗಿ ಇಲ್ಲಿನ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ಆರೋಗ್ಯ ಅರಿವು ಶಿಬಿರ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ವಹಿಸಿ ಮಾತನಾಡಿ, ನಮ್ಮ ಮಾನಸಿಕ ಸಮಸ್ಯೆಗಳಿಗೆ ಸಮಾಜ ಅಥವಾ ಕುಟುಂಬ ಕಾರಣವೆಂದು ದೂಷಿಸುವುದು ಸರಿಯಲ್ಲ. ನಮ್ಮ ಬುದ್ಧಿಶಕ್ತಿಯ ಪರಿಜ್ಞಾನದ ಅಡಿಪಾಯ ಗಟ್ಟಿಯಿದ್ದರೆ ಯಾವುದೇ ಮಾನಸಿಕ ಸಮಸ್ಯೆಗಳು ನಮ್ಮನ್ನು ಬಾಧಿಸುವುದಿಲ್ಲ ಎಂದರು.
ಅರಿವು ಕಾರ್ಯಕ್ರಮದಲ್ಲಿ ಮನೋವೈದ್ಯ ಡಾ. ಸತೀಶ್ ಮಾತನಾಡಿ, ಮಾನಸಿಕ ಅನಾರೋಗ್ಯವನ್ನು ನಿರ್ಲಕ್ಷö್ಯ ಮಾಡಬಾರದು. ಮಾನಸಿಕ ಒತ್ತಡಗಳು ಹೆಚ್ಚಾಗಿ ಹೇಯಕೃತ್ಯಗಳು, ಆತ್ಮಹತ್ಯೆಗಳು ನಡೆಯಬಹುದೆಂದು ತಿಳಿಸಿದರು. ಮತ್ತೊಬ್ಬ ಮನಶಾಸ್ತç ವೈದ್ಯ ರಮೇಶ್, ದುಶ್ಚಟದಿಂದ ಜೀವನವನ್ನೇ ಹಾಳು ಮಾಡಿಕೊಳ್ಳತ್ತಿರುವ ಯುವ ಸಮುದಾಯದವರಿಗೆ ಸರಿಯಾದ ಮಾರ್ಗದರ್ಶನವನ್ನು ತಂದೆ-ತಾಯಿ ನೀಡಬೇಕು ಎಂದರು. ಮಕ್ಕಳು ದಿನಪತ್ರಿಕೆ ಓದುವ ಹವ್ಯಾಸ, ಕ್ರೀಡೆ, ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿÀಸಿಕೊಟ್ಟರು. ಶಿಬಿರದಲ್ಲಿ ತರಬೇತು ದಾರರಾದ ಸ್ವಾತಿಯವರು ಶಕ್ತಿ ವೇದ ಪರಿವರ್ತನಾ ಯೋಗ ಮತ್ತು ಇದರಿಂದ ಆಗುವ ಪ್ರಯೋಜನ ಹಾಗೂ ವಿಶ್ವಾಸ್ ಅವರು ಜುಂಬ ನೃತ್ಯದಿಂದ ದೇಹದಲ್ಲಿ ಸಕಾರಾತ್ಮಕ ಪರಿಣಾಮ ಬೀರುವ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಶಾಲೆಯ ಶಿಕ್ಷಕ, ಶಿಕ್ಷಕಿಯರು, ಮಕ್ಕಳು, ಪೋಷಕರು ಹಾಜರಿದ್ದರು.