*ಗೋಣಿಕೊಪ್ಪ, ಅ. ೧೬: ಗೋಣಿಕೊಪ್ಪ ರೋಟರಿ ಸಂಸ್ಥೆ ಮೈಸೂರಿನ ಪ್ರಗತಿ ಮತ್ತು ಪ್ರಥಮ್ ಸಂಸ್ಥೆ ಸಹಯೋಗದೊಂದಿಗೆ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಮೇಳ ನಡೆಸಲಾಯಿತು.
ಸರ್ಕಾರಿ ಶಾಲೆಯ ವಿದ್ಯಾರ್ಥಿ ಗಳಿಗೆ ಪ್ರಥಮ್ ಸಂಸ್ಥೆಯ ಸದಸ್ಯರುಗಳು ಕಳೆದ ಎರಡು ತಿಂಗಳಿನಿAದ ಇಂಗ್ಲೀಷ್ ಭಾಷೆ ಮತ್ತು ವಿಚಾರಗಳ ಬಗ್ಗೆ ತರಬೇತಿ ನೀಡಿ ಇಂಗ್ಲೀಷ್ ಭಾಷೆಯ ಬಗ್ಗೆ ಅಭಿಮಾನ ಮತ್ತು ಸರ್ಕಾರಿ ಶಾಲೆಯ ಮಕ್ಕಳಲ್ಲಿರುವ ಆತಂಕವನ್ನು ಕಡಿಮೆಗೊಳಿಸುವ ಪ್ರಯತ್ನ ಸಫಲತೆಯನ್ನು ಕಂಡುಕೊAಡರು.
ಇAಗ್ಲೀಷ್ ಮೇಳದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆ ಮತ್ತು ವಿವಿಧ ಪಠ್ಯ ಚಟುವಟಿಕೆಗಳ ಬಗ್ಗೆ ಅತಿಥಿಗಳಿಗೆ ತಿಳಿಸುವ ಮೂಲಕ ಇಂಗ್ಲೀಷ್ ಕಲಿಕೆಯ ಬಗ್ಗೆ ನಿರಾಳ ಮನಸ್ಥಿತಿಯನ್ನು ವ್ಯಕ್ತಪಡಿಸಿದರು.
ಶಾಲೆಯ ಸಾಂಸ್ಕöÈತಿಕ ವೇದಿಕೆ ಯಲ್ಲಿ ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷೆ ಜಪ್ಪೆಕೊಡಿ ಸುಭಾಷಿಣಿ ಜ್ಯೋತಿ ಬೆಳಗಿಸಿ ಇಂಗ್ಲೀಷ್ ಮೇಳಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೀಳರಿಮೆಯನ್ನು ಬಿಟ್ಟು ಆತ್ಮವಿಶ್ವಾಸ ದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಯಾವುದೇ ವಿಚಾರವನ್ನು ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪತ್ರಿಕೆಗಳನ್ನು ಮತ್ತು ಕಥೆ, ಕಾದಂಬರಿಗಳ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿಯೇ ಇಂಗ್ಲೀಷ್ ಪುಸ್ತಕಗಳ ಓದುವಿಕೆಯಿಂದ ಇಂಗ್ಲೀಷ್ ಕಲಿಕೆಯನ್ನು ಸರಳೀಕರಣಗೊಳಿಸಿ ಕೊಳ್ಳಬಹುದು ಎಂದು ಹೇಳಿದರು.
ರೋಟರಿ ಸಂಸ್ಥೆಯ ನಿರ್ದೇಶಕ ಹಿರಿಯ ವೈದ್ಯ ಡಾ. ಚಂದ್ರಶೇಖರ್ ಮಾತನಾಡಿ, ಕೇವಲ ಅಂಕಗಳಿಗಷ್ಟೇ ಓದುವ ಪ್ರಮಯವನ್ನು ಬದಿಗಿಟ್ಟು ಸಮಾಜದಲ್ಲಿ ದೈರ್ಯ ಮತ್ತು ಬಲವಾಗಿ ಬದುಕಲು ಬೇಕಾದ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕೆAದು ತಿಳಿಸಿದರು. ಅಂಕಗಳಿAದ ಕೇವಲ ಉದ್ಯೋಗವಷ್ಟೇ ದೊರಕಲು ಸಾಧ್ಯ. ಬದುಕನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳಲು ಜ್ಞಾನ ವಂತರಾಗಿ ಉತ್ತಮ ಮಾತಗಳನ್ನಾಡುವ ಮೂಲಕ ಗುರುತಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿದ್ದ ಎಂ.ಜಿ. ಮೋಹನ್, ದಿಲನ್ ಚಂಗಪ್ಪ, ಪ್ರಥಮ್ ಸಂಸ್ಥೆಯ ಮುಖ್ಯಸ್ಥ ಮಹಾದೇವ ಸ್ವಾಮಿ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶಾಂತಿ, ಮುಖ್ಯೋಪಾಧ್ಯಾಯ ಕುಮಾರ್ ಹೆಚ್.ಕೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.