ಮಡಿಕೇರಿ, ಅ. ೧೬: ವೀರಾಜಪೇಟೆಯ ವಿ ಫ್ರೆಂಡ್ಸ್ ವತಿಯಿಂದ ೨೬ನೇ ವರ್ಷದ ಶ್ರೀ ಕಾವೇರಿ ಮಾತೆಯ ತೀರ್ಥ ಪ್ರಸಾದವನ್ನು ತಾ. ೧೮ ರಂದು ಬೆಳಿಗ್ಗೆ ೬ ಗಂಟೆಯಿAದ ವೀರಾಜಪೇಟೆಯ ಮುಖ್ಯ ಬೀದಿಗಳಲ್ಲಿ ವಿತರಿಸಲಾಗುವುದು ಎಂದು ಅಧ್ಯಕ್ಷ ಮಾದೆಯಂಡ ಸಂಪಿ ಪೂಣಚ್ಚ ತಿಳಿಸಿದ್ದಾರೆ.
ಚೆಟ್ಟಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ತಾ. ೧೮ ರಂದು ಪೂರ್ವಾಹ್ನ ೯ಗಂಟೆಗೆ ಕಾವೇರಿ ತೀರ್ಥವಿತರಣಾ ಕಾರ್ಯ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೂರ್ವಾಹ್ನ ೮.೪೫ಕ್ಕೆ ಸಹಕಾರ ಸಂಘದ ಮುಂದೆ ಪ್ರತಿಷ್ಠಾಪಿಸಲಾಗಿರುವ ಕಾವೇರಿ ಮಾತೆಯ ಪ್ರತಿಮೆಗೆ ವಿಶೇಷ ಅಲಂಕಾರದೊAದಿಗೆ ಕಾವೇರಿ ಸಂಕ್ರಮಣದ ವಿಶೇಷ ಪೂಜೆಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸೋಮವಾರಪೇಟೆ: ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ತಾ. ೧೮ರಂದು ಬೆಳಿಗ್ಗೆ ೭ ಗಂಟೆಗೆ ಪವಿತ್ರ ಕಾವೇರಿ ತೀರ್ಥ ಪ್ರಸಾದ ವಿತರಣೆ ಮಾಡಲಾಗುವುದು ಎಂದು ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ತಿಳಿಸಿದ್ದಾರೆ.