ಕೂಡಿಗೆ, ಅ. ೧೬: ಕುಶಾಲನಗರದಿಂದ ಶಿರಂಗಾಲದವರೆಗಿನ ಹಾಸನ ರಾಜ್ಯ ಹೆದ್ದಾರಿಯ ರಸ್ತೆಯು ಅತಿಯಾದ ಮಳೆ ಮತ್ತು ಭಾರೀ ವಾಹನಗಳ ಸಂಚಾರದಿAದಾಗಿ ಗುಂಡಿಮಯವಾಗಿತ್ತು. ಸಾರ್ವಜನಿಕ ದೂರಿನ ಮೇರೆಗೆ ಇದೀಗ ಕುಶಾಲನಗರ ವಲಯ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ಕುಶಾಲನಗರದಿಂದ ಶಿರಂಗಾಲದವರೆಗೆ ರಸ್ತೆ ದುರಸ್ತಿ ಕಾರ್ಯವನ್ನು ಆರಂಭಿಸಲಾಗಿದೆ.