ಮಡಿಕೇರಿ, ಅ. ೧೫: ಕೊಡಗು ಪತ್ರಿಕಾ ಭವನ ಟ್ರಸ್ಟ್ನ ೨೧ನೇ ವಾರ್ಷಿಕೋತ್ಸವದ ಅಂಗವಾಗಿ ತಾ. ೨೩ ರÀಂದು ಪತ್ರಕರ್ತರಿಗೆ ಒಳಾಂಗಣ ಕ್ರೀಡಾಕೂಟವನ್ನು ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಗಳು- ಟೇಬಲ್ ಟೆನ್ನಿಸ್ ಸಿಂಗಲ್ಸ್ ಮತ್ತು ಡಬಲ್ಸ್, ಕೇರಂ ಸಿಂಗಲ್ಸ್ ಮತ್ತು ಡಬಲ್ಸ್, ಚೆಸ್ (ಪತ್ರಕರ್ತರು ಮತ್ತು ಅವರ ಮಕ್ಕಳಿಗೆ) ಆಸಕ್ತ ಪತ್ರಕರ್ತರು ತಾವು ಪಾಲ್ಗೊಳ್ಳುವ ಕ್ರೀಡೆಗೆ ತಮ್ಮ ಹೆಸರನ್ನು ಎಸ್.ಜಿ. ಉಮೇಶ್, ಪ್ರಧಾನ ಕಾರ್ಯದರ್ಶಿ (೯೯೮೦೬ ೨೭೯೨೦), ಕೆ. ತಿಮ್ಮಪ್ಪ, ಖಜಾಂಚಿ (೯೪೪೮೦೦೮೩೦೫) ಕೊಡಗು ಪತ್ರಿಕಾ ಭವನ ಟ್ರಸ್ಟ್, ಮಡಿಕೇರಿ ಇವರಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.