ಮಡಿಕೇರಿ, ಅ. ೧೫: ಕೊಡಗು ಗೌಡ ಸಮಾಜದಲ್ಲಿನ ಗೌಡ ಮಹಿಳಾ ಒಕ್ಕೂಟದ ಕಚೇರಿಯಲ್ಲಿ ಇತ್ತೀಚೆಗೆ ಶಾರದಾ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು. ಈ ಸಂದರ್ಭ ಒಕ್ಕೂಟದ ಕಾರ್ಯಕಾರಿ ಸಮಿತಿಯಿಂದ ಸ್ವಇಚ್ಚೆಯಿಂದ ನಿರ್ಗಮಿಸಿದ ಕುಂಜಿಲನ ಮುತ್ತಮ್ಮ, ಪರಿವಾರನ ತಂಗಮ್ಮ, ಪಾಂಡನ ಪುಷ್ಪಾವತಿ ಮತ್ತು ಕುಂಚಡ್ಕ ಕಸ್ತೂರಿಯವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡಲಾಯಿತು. ೫೦ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದ ಈ ಸಮಾರಂಭವನ್ನು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ವತಿಯಿಂದ ಆಯೋಜಿಸಲಾಗಿತ್ತು.