ವೀರಾಜಪೇಟೆ: ವೀರಾಜಪೇಟೆ ಸಮೀಪದ ಚಿಟ್ಟಡೆ ಗ್ರಾಮದ ಶಾಫಿ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಜಾಥಾವನ್ನು ಗುಂಡಿಗೆರೆ ಮುಕಾಮ್ ಜಿಹಾರತ್ ಮಸೀದಿಯವರೆಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ಮತ್ತು ಮದರಸದ ಮಕ್ಕಳಿಂದ ರಸ್ತೆಯುದ್ದಕ್ಕೂ ದಫ್ ಪ್ರದರ್ಶನ ಆಕರ್ಷಣೆಯಾಗಿತ್ತು.
ಸಿದ್ದಾಪುರ: ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮ ದಿನಾಚರಣೆಯನ್ನು ಮಾಲ್ದಾರೆಯಲ್ಲಿ ಸಂಭ್ರಮದಿAದ ಆಚರಿಸಲಾಯಿತು. ನೂರ್ಲ್ ಹಿಮಾನ್ ಮದರಸದಿಂದ ಬಾಡಗ ಬದರಿಯ ಮಸೀದಿವರೆಗೆ ಕಾಲ್ನಡಿಗೆ ಜಾಥಾ ಮೂಲಕ ಪ್ರವಾದಿ ಜೀವನ ಸಂದೇಶವನ್ನು ಸಾರಲಾಯಿತು. ಮದರಸ ವಿದ್ಯಾರ್ಥಿಗಳಿಂದ ಧಪ್ ಪ್ರದರ್ಶನ ನಡೆಯಿತು.
ಮದರಸ ಮಕ್ಕಳಿಂದ ಪ್ರವಾದಿ ಕುರಿತ ಗೀತೆಗಳು, ಭಾಷಣಗಳು ಮತ್ತಿತರ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು. ಈ ಸಂದರ್ಭ ಮಸೀದಿಯ ಅಧ್ಯಕ್ಷ ಮೊಯಿದೀನ್, ಕಾರ್ಯದರ್ಶಿ ಇಸ್ಮಾಯಿಲ್, ಅಬ್ದುಲ್ ಖಾದರ್ ಸಖಾಫಿ, ನೌಶಾದ್ ಆಶ್ರಫಿ, ಕಮರು ಉಸ್ತಾದ್, ನಾಸರ್ ಉಸ್ತಾದ್, ಅಬುಟ್ಟಿ, ಹನೀಫ, ಶೌಕತ್ ಆಲಿ, ಗಾಪುರ್, ಮದರಸ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು. ಅನ್ನದಾನ ನಡೆಯಿತು.