ಮಡಿಕೇರಿ, ಅ. ೧೨: ಹಾಡಹಗಲೇ ಮಡಿಕೇರಿಯ ಹೃದಯಭಾಗದಲ್ಲಿರುವ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಶಂಕಿತ ವ್ಯಕ್ತಿಯೋರ್ವನನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿದು ಬಂದಿದೆ. ನಗರದ ಅಪ್ಪಚ್ಚಕವಿ ರಸ್ತೆಯಲ್ಲಿರುವ ದಿನೇಶ್‌ರಾವ್ ಎಂಬವರ ಮನೆಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿ ಮನೆಯೊಳಗಡೆ ಇದ್ದ ದಿನೇಶ್ ಅವರ ಪತ್ನಿ ಪುಷ್ಪಾವತಿ ಅವರ ಕತ್ತಿನಲ್ಲಿದ್ದ ಕರಿಮಣಿ ಸರ ಹಾಗೂ ಕಿವಿಯಲ್ಲಿದ್ದ ವಾಲೆಯೊಂದನ್ನು ಅಪಹರಿಸಿ ಪರಾರಿಯಾಗಿದ್ದ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಳೆ ಇದ್ದುದರಿಂದ ಪೊಲೀಸರಿಗೆ ದರೋಡೆಕೋರನ ಜಾಡು ಹಿಡಿಯಲು ಸಾಧ್ಯವಾಗಿರಲಿಲ್ಲ. ಇಂದು ಸ್ಥಳಕ್ಕೆ ಸಿಬ್ಬಂದಿಗಳೊAದಿಗೆ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.