ಹೊದ್ದೂರು, ಅ. ೧೨: ಗತಕಾಲದಲ್ಲಿ ಅಜ್ಜನೂ - ತಾಯಿಯೂ ನೇಲೆಯೂರಿದ, ಕುಟುಂಬಕ್ಕೆ ದಾರಿ ದೀಪವಾದ ಜಮ್ಮಾ ಜಾಗವನ್ನು ಯಾವುದೇ ಕಾರಣಕ್ಕೂ ಮಾರದಿರಿ ಎಂದು ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮನವಿ ಮಾಡಿದರು.

ಮೂರ್ನಾಡು ಕೊಡವ ಸಮಾಜದ ಕೈಲ್‌ಪೊಳ್ದ್ ಒತ್ತೋರ್ಮೆ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಗುರುಕಾರೋಣ ಎಂದು ಕರೆಯಲ್ಪಡುವ ಅಜ್ಜನೂ - ತಾಯಿ ನೀಡಿದ ಜಮ್ಮಾ ಜಾಗವನ್ನು ಮಾರಾಟ ಮಾಡದಿರಿ. ಬದುಕಲಿಕ್ಕಾಗಿ ಹೊರ ದೇಶ, ಹೊರ ಜಿಲ್ಲೆಗೆ ತೆರಳಿದರೂ, ತನ್ನ ತಾಯ್ನಾಡಿನ ಕುಟುಂಬದ ಬಗ್ಗೆ ಪ್ರೀತಿ - ವಿಶ್ವಾಸ, ಅಭಿಮಾನ ಬೆಳೆಸಿಕೊಳ್ಳುವುದರ ಮೂಲಕ, ಜಮ್ಮಾ ಜಾಗವನ್ನು ಶಾಶ್ವತ ಬದುಕಿನ ನೆಲೆಯಾಗಿಸುವಲ್ಲಿ ಕೈಜೋಡಿಸು ವಂತಾಗಬೇಕೆAದು ಕಿವಿಮಾತು ಹೇಳಿದರು.

ಇಂದು ಬದುಕಿಗೋಸ್ಕರ ತನ್ನೆಲ್ಲಾ ಸರ್ವಸ್ವದೊಂದಿಗೆ ಹಿರಿಯರು ನೀಡಿದÀ ಜಮ್ಮಾ ಜಾಗವನ್ನು ಮಾರಾಟ ಮಾಡುವುದರಲ್ಲಿ ಅರ್ಥವಿಲ್ಲ. ತನ್ನ ತಾಯ್ನಾಡಿನ ಕುಟುಂಬದ ಬಗ್ಗೆ ಪ್ರೀತಿ - ವಿಶ್ವಾಸ, ಅಭಿಮಾನ ಬೆಳೆಸಿಕೊಳ್ಳುವುದರ ಮೂಲಕ, ಜಮ್ಮಾ ಜಾಗವನ್ನು ಶಾಶ್ವತ ಬದುಕಿನ ನೆಲೆಯಾಗಿಸುವಲ್ಲಿ ಕೈಜೋಡಿಸು ವಂತಾಗಬೇಕೆAದು ಕಿವಿಮಾತು ಹೇಳಿದರು.

ಇಂದು ಬದುಕಿಗೋಸ್ಕರ ತನ್ನೆಲ್ಲಾ ಸರ್ವಸ್ವದೊಂದಿಗೆ ಹಿರಿಯರು ನೀಡಿದÀ ಜಮ್ಮಾ ಜಾಗವನ್ನು ಮಾರಾಟ ಮಾಡುವುದರಲ್ಲಿ ಅರ್ಥವಿಲ್ಲ. ಕಾಲೇಜು ಪ್ರಾಂಶುಪಾಲ ಡಾ|| ಚೌರೀರ ಜಗತ್ ತಿಮ್ಮಯ್ಯ ಅವರು ಸನ್ಮಾನಿತರ ಪರ ಮಾತನಾಡುತ್ತಾ, ಸನ್ಮಾನ ಎಂಬುದು ಜವಾಬ್ದಾರಿ ಹೆಚ್ಚಿಸುವ ಕಾರ್ಯ.

(ಮೊದಲ ಪುಟದಿಂದ) ಮನುಷ್ಯ ಯಾವುದೇ ಹುದ್ದೆಯನ್ನು, ಸ್ಥಾನ-ಮಾನ ಗಳಿಸಲು ಕಠಿಣ ಪರಿಶ್ರಮ ಮುಖ್ಯ. ಸೇವೆಯೊಂದಿಗೆ, ನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿ, ಪದ್ದತಿಯನ್ನು ಪೋಷಿಸಿ, ಉಳಿಸಿ - ಬೆಳೆಸುವಂತಾಗಬೇಕು. ಸಂಸ್ಕೃತಿ ಉಳಿದರೆ, ಸಮಾಜ, ಜನಾಂಗ ಉಳಿಯಲು ಸಾಧ್ಯ ಎಂದು ಹೇಳಿದರು. ಸಮಾರಂಭದಲ್ಲಿ ಡಾ|| ಚೌರೀರ ಜಗತ್ ತಿಮ್ಮಯ್ಯ, ಅಂರ‍್ರಾಷ್ಟಿçÃಯ ಹಾಕಿಪಟು, ಏಕಲವ್ಯ ಪ್ರಶಸ್ತಿ ವಿಜೇತ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ, ಕಂಬೀರAಡ ಪೊನ್ನಮ್ಮ ಬೋಪಣ್ಣ ಅವರುಗಳನ್ನು ಸಮಾಜದ ವತಿಯಿಂದ ಶಾಲು ಹೊದಿಸಿ, ಫಲ-ತಾಂಬೂಲ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮಂಡೇಪAಡ ಪಾರ್ವತಿ ಕುಶಾಲಪ್ಪ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕೊಡವ ಸಮಾಜದ ಉಪಾಧ್ಯಕ್ಷ ಚೇನಂಡ ಅಯ್ಯಣ್ಣ ವಹಿಸಿದ್ದರು. ಸಮಾಜದ ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ ನಿರೂಪಿಸಿ, ನಿರ್ದೇಶಕಿ ಮುಂಡAಡ ಜಮುನಾ ಪ್ರಾರ್ಥಿಸಿ, ನಿರ್ದೇಶಕ ಅವರೆಮಾದಂಡ ಅನಿಲ್ ವಂದಿಸಿದರು. ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಕೈಲ್‌ಪೊಳ್ದ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ವಿವಿಧ ಕ್ರೀಡಾಕೂಟಗಳು, ವಾಲಗತಾಟ್ ಸ್ಪರ್ಧೆಗಳು ನಡೆದವು. -ವರದಿ : ಸಾಬ ಸುಬ್ರಮಣಿ