ಮಡಿಕೇರಿ, ಅ. ೧೨: ಕಜಕಿಸ್ತಾನದ ಟಾಲ್ಡಿಕಾರ್ಗನ್‌ನಲ್ಲಿ ಏಷ್ಯನ್ ಹಾಕಿ ಫೆಡರೇಷನ್ (ಎ.ಹೆಚ್.ಎಫ್.) ವತಿಯಿಂದ ನಡೆಯುತ್ತಿರುವ ಮಹಿಳಾ ಜೂನಿಯರ್ ಎ.ಹೆಚ್.ಎಫ್. ಕಪ್ - ೨೦೨೨ ಪಂದ್ಯಾವಳಿಯ ‘ಟೆಕ್ನಿಕಲ್ ಡೆಲಿಗೇಟ್’ (ತೀರ್ಪುಗಾರ್ತಿ) ಆಗಿ ಕೊಡಗಿನವರಾದ ಪುಳ್ಳಂಗಡ ರೋಹಿಣಿ ಬೋಪಣ್ಣ ಅವರು ಆಯ್ಕೆಯಾಗಿದ್ದಾರೆ. ಏಷ್ಯನ್ ಹಾಕಿ ಫೆಡರೇಷನ್ ಪರವಾಗಿ ರೋಹಿಣಿ ಈ ಪಂದ್ಯಾವಳಿಗೆ ಆಯ್ಕೆಗೊಂಡಿದ್ದಾರೆ. ತಾ. ೧೨ ರಿಂದ ಆರಂಭವಾಗಿರುವ ಪಂದ್ಯಾವಳಿ ತಾ. ೨೧ ರವರೆಗೆ ನಡೆಯಲಿದೆ.