ಕುಶಾಲನಗರ, ಅ. ೧೧: ಕಳೆದ ೨ ವರ್ಷಗಳ ಕಾಲ ಕುಶಾಲನಗರ ಯೋಜನಾ ಪ್ರಾಧಿಕಾರದಲ್ಲಿ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಅಧಿಕಾರಿ ಎ.ಎನ್. ಪ್ರವೀಣ್ ಅವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ಕುಡಾ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಯೋಜನಾ ಪ್ರಾಧಿಕಾರದ ಎಂ.ಎA. ಚರಣ್ ಮತ್ತು ನಿರ್ದೇಶಕರು ಸನ್ಮಾನಿಸಿದರು.
ಈ ಸಂದರ್ಭ ಕುಡಾ ನಿರ್ದೇಶಕರಾದ ವಿ.ಡಿ. ಪುಂಡರೀಕಾಕ್ಷ, ವೈಶಾಕ್, ಮಧುಸೂದನ್, ನೂತನ ಸದಸ್ಯ ಕಾರ್ಯದರ್ಶಿ ಜೆ. ಕುಮಾರ್ ಮತ್ತು ಸಿಬ್ಬಂದಿ ವರ್ಗದವರು ಇದ್ದರು.