*ಗೋಣಿಕೊಪ್ಪ, ಅ. ೧೧: ಪೊನ್ನಂಪೇಟೆ ಅಖಿಲ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ಮಹಾಸಭೆ ನಡೆಯಿತು. ಗೋಣಿಕೊಪ್ಪ ಅಖಿಲ ಅಮ್ಮಕೊಡವ ಸಮಾಜದ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ ಅಧ್ಯಕ್ಷತೆಯಲ್ಲಿ ನೆರವೇರಿತು, ಜನಾಂಗದ ಸುಮಾರು ೧೦೦ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವನ್ನು ವಿತರಿಸಿದರು
ಸಂಘದ ಗೌರವ ಕಾರ್ಯದರ್ಶಿ ಅಮ್ಮತ್ತೀರ ಎಸ್ ವಾಸುವರ್ಮರವರು ಕಳೆದ ಸಾಲಿನ ವರದಿ ವಾಚಿಸಿದರು. ಖಜಾಂಚಿ ಅಮ್ಮತ್ತಿರ ಚಂದ್ರಶೇಖರ್, ಸದಸ್ಯರುಗಳಾದ ಬಾನಂಡ್ ಆರ್. ಪ್ರಕಾಶ್, ಮನ್ನಕ್ಕಮನೆ ಬಾಲಕೃಷ್ಣ, ಬಾಚಮಂಡ ಅನುಪಮ ಕಿಶೋರ್, ಅಚ್ಚಿಯಂಡ ಗೀತಾ ನವೀನ್, ನೆರೆಯಂಡಮ್ಮAಡ ಕೆ. ಜನಾರ್ಧನ, ಬಲ್ಯಂಡ ಕಾಂತಿ ಪ್ರಭು, ಚೊಟ್ಟೊಳಿಯಮ್ಮನ ಮೋಹನ ಇದ್ದರು.