ಮಡಿಕೇರಿ, ಅ. ೧೧: ಬೇಲಿ ವಿಚಾರದಲ್ಲಿನ ವೈಷಮ್ಯಕ್ಕಾಗಿ ವ್ಯಕ್ತಿಯೋರ್ವ ನಾಯಿಗೆ ಗುಂಡು ಹಾರಿಸಿದ ಘಟನೆ ನಡೆದಿದೆ. ತಾಳತ್ತಮನೆಯ ಎಂ.ಕೆ. ನಾಚಪ್ಪ ಹಾಗೂ ರಾಜೀವ್‌ಲೋಚನ ಎಂಬವರುಗಳ ನಡುವೆ ಮನೆಯ ಬೇಲಿ ವಿಚಾರದಲ್ಲಿ ವೈಷಮ್ಯವಿತ್ತು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ನಾಚಪ್ಪ ಅವರು ತಮ್ಮ ಸೈಬೀರಿಯನ್ ಹಸ್ಕಿ ತಳಿಯ ಸಾಕುನಾಯಿಯೊಂದಿಗೆ ವಾಕಿಂಗ್ ತೆರಳುತ್ತಿದ್ದಾಗ ರಾಜೀವ್ ಲೋಚನ, ನಾಚಪ್ಪ ಅವರ ನಾಯಿಗೆ ಗುಂಡು ಹಾರಿಸಿದ್ದಾರೆ. ನಾಯಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ನಾಚಪ್ಪ ಅವರು ನೀಡಿದ ದೂರಿನನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.