ಮಡಿಕೇರಿ, ಅ. ೧೧: ‘ದಿ ಡಿಸೆಂಟ್ ಆಫ್ ದಿ ಡಿವೈನ್ ಇನ್ ದಿ ಲ್ಯಾಂಡ್ ಆಫ್ ಕಾವೇರಿ - ಹಿಸ್ಟರಿ ಆಫ್ ಶ್ರೀ ರಾಮಕೃಷ್ಣ ಶಾರದಾಶ್ರಮ, ಪೊನ್ನಂಪೇಟೆ’ ಪುಸ್ತಕದ ಬಿಡುಗಡೆ ಕಾರ್ಯಕ್ರಮ ತಾ. ೧೨ ರಂದು (ಇಂದು) ೧೧ ಗಂಟೆಗೆ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ನಡೆಯಲಿದೆ.
ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಸ್ವಾಮೀಜಿ ಅವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಈ ಹಿಂದೆ ಪೊನ್ನಂಪೇಟೆ ಶಾರದಾಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ಬೋಧ ಸ್ವರೂಪನಂದ ಅವರು ತಾ. ೧೪ ರವರೆಗೆ ಸಾರ್ವಜನಿಕ ಭೇಟಿಗೆ ಲಭ್ಯವಿರಲಿದ್ದಾರೆ ಎಂಬುದಾಗಿ ಅವರು ತಿಳಿಸಿದ್ದಾರೆ.