ಗೋಣಿಕೊಪ್ಪಲು, ಅ.೧೦ : ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಯುವಕನೋರ್ವ ಕೊಡಗಿನ ಪ್ರವಾಸಿ ಕೇಂದ್ರಕ್ಕೆ ಆಗಮಿಸಿದ ವೇಳೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಶ್ರೀಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಯುವಕ ಅಭಿಷೇಕ್(೩೧) ಮೂಲತಃ ಚಿಕ್ಕಮಂಗಳೂರು ಜಿಲ್ಲೆಯವನು ಎಂದು ತಿಳಿದು ಬಂದಿದೆ. ಈತ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ.

ದ.ಕೊಡಗಿನ ವಿವಿಧ ಭಾಗಗಳಿಗೆ ಪ್ರವಾಸಕ್ಕೆಂದು ಅಭಿಷೇಕ್ ಹಾಗೂ ಸ್ನೇಹಿತರು ಆಗಮಿಸಿದ್ದರು. ಶನಿವಾರದಂದು ಬೆಂಗಳೂರಿನಿAದ ಆಗಮಿಸಿ ಟಿ.ಶೆಟ್ಟಿಗೇರಿ ಗ್ರಾಮದ ಹೊಂಸ್ಟೇ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅಭಿಷೇಕ್‌ಗೆ ಸಂಜೆಯ ವೇಳೆಯಲ್ಲಿ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡಿತು.

(ಮೊದಲ ಪುಟದಿಂದ) ಹೀಗಾಗಿ ಅಭಿಷೇಕ್ ರ‍್ಯಾಫ್ಟಿಂಗ್ ಸೇರಿದಂತೆ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದೆ ಕೊಠಡಿಯಲ್ಲಿಯೇ ತಂಗಿದ್ದ. ಉಳಿದ ಸ್ನೇಹಿತರು ರ‍್ಯಾಫ್ಟಿಂಗ್ ಸೇರಿದಂತೆ ಇನ್ನಿತರ ಚಟುವಟಿಕೆ ಮುಂದುವರೆಸಿ ಹೋಂಸ್ಟೆಗೆ ಆಗಮಿಸಿದ ವೇಳೆ ಅಭಿಷೇಕ್ ಅಸ್ವಸ್ಥಗೊಂಡಿರುವುದು ಸ್ನೇಹಿತರಿಗೆ ತಿಳಿದು ಬಂದಿದೆ. ಕೂಡಲೇ ಅಭಿಷೇಕ್‌ರನ್ನು ಗೋಣಿಕೊಪ್ಪಲುವಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ನೇಹಿತರು ಕರೆದೊಯ್ದರು.

ಆದರೆ ಮಾರ್ಗ ಮಧ್ಯೆ ಹೃದಯಾಘಾತಕ್ಕೊಳಗಾದ ಅಭಿಷೇಕ್ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ನಂತರ ಗೋಣಿಕೊಪ್ಪಲುವಿನ ಸರ್ಕಾರಿ ಆಸ್ಪತ್ರೆಗೆ ಮೃತ ದೇಹವನ್ನು ಸಾಗಿಸಿ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ತರುವಾಯ ಸಂಬAಧಿಕರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟ್ಟ ವೃತ್ತ ನಿರೀಕ್ಷಕರಾದ ಮಂಜಪ್ಪ ಹಾಗೂ ಇತರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಿದ್ದಾರೆ.