ವೀರಾಜಪೇಟೆ, ಅ. ೧೦: ವಾಹನವನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ಸುಭಾಷ್ ನಗರದ ವೀರಾಜಪೇಟೆ, ಅ. ೧೦: ವಾಹನವನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ಸುಭಾಷ್ ನಗರದ ಪ್ರಕರಣದ ಮತ್ತೋರ್ವ ಆರೋಪಿಯು ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಘಟನೆಯ ಹಿನ್ನೆಲೆ: ತಾ. ೭ ರಂದು ಕೇರಳ ರಾಜ್ಯದ ಮಟ್ಟನೂರು ನಿವಾಸಿ ಅನ್ವರ್ ತನ್ನ ಇಬ್ಬರು ಸ್ನೇಹಿತರೊಂದಿಗೆ
(ಮೊದಲ ಪುಟದಿಂದ) ವಿವಾಹ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ತೆರಳಲು ಮಾಕುಟ್ಟ ಮೂಲಕ ವಿರಾಜಪೇಟೆ ನಗರಕ್ಕೆ ಆಗಮಿಸಿದ್ದಾರೆ.
ವೀರಾಜಪೇಟೆ ನಗರದಲ್ಲಿ ಅನ್ವರ್ ತನಗೆ ತಿಳಿದವರೊಬ್ಬರು ಇದ್ದಾರೆ ಮಾತನಾಡಿಸಿಕೊಂಡು ಹೋಗುವ ಎಂದು ಹೇಳಿ ಆರೋಪಿ ರಮ್ಯಳನ್ನು ಸಂಪರ್ಕಿಸುತ್ತಾನೆ. ಆಕೆ ಅಯ್ಯಪ್ಪ ಬೆಟ್ಟದ ಹೋಂಸ್ಟೇ ಒಂದಕ್ಕೆ ಬರಲು ತಿಳಿಸಿದ್ದು, ಈ ಸಂದರ್ಭ ಮಾರ್ಗ ಮಧ್ಯೆ ಅರೋಪಿಗಳಾದ ಅಬ್ದುಲ್ ಜಮೀಲ್ ಮತ್ತು ರಮ್ಯ ಕೃತ್ಯಕ್ಕೆ ಯೋಜನೆ ರೂಪಿಸಿ ಇತರ ಸಹಚರರೊಂದಿಗೆ ದರೋಡೆಗೆ ಸಿದ್ಧರಾಗುತ್ತಾರೆ.
ಅದರಂತೆ ರಾತ್ರಿ ೧೦ ರ ಸಮಯದಲ್ಲಿ ಕಾರಿನಲ್ಲಿ ಅಯ್ಯಪ್ಪ ಬೆಟ್ಟಕ್ಕೆ ತೆರಳುತ್ತಿದ್ದ ಕೇರಳ ಮೂಲದ ವ್ಯಕ್ತಿಗಳನ್ನು ಸಂಪರ್ಕಿಸಿದ ಮತ್ತೋರ್ವ ಆರೋಪಿ ಜಮೀಲ್ ತನ್ನ ಆಟೋದ ಮೂಲಕ ತೆರಳಿ ಅವರಿಗೆ ದಾರಿ ತೋರಿಸುತ್ತಾನೆ. ಕಾರಿನ ಹಿಂಬದಿಯಲ್ಲಿ ಮತ್ತೊಂದು ಆಟೋ ಕಾರನ್ನು ಹಿಂಬಲಿಸಿ ಈ ಎರಡು ಆಟೋಗಳಿಂದ ಇಳಿದ ಆರೋಪಿಗಳು ಅಯ್ಯಪ್ಪ ಬೆಟ್ಟದ ‘ವ್ಯೂ ಪಾಯಿಂಟ್’ ಬಳಿ ಕಾರನ್ನು ಅಡ್ಡಗಟ್ಟಿ ಏಕಾಏಕಿ ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ.
ಕಾರಿನಲ್ಲಿದ್ದ ಮೂವರನ್ನು ಕತ್ತಿಯಿಂದ ಬೆದರಿಸುತ್ತಾರೆ. ಕೈಯಲ್ಲಿದ್ದ ಹಣ ಮತ್ತು ಮೊಬೈಲ್ ಅಪಹರಿಸಿದ್ದಲ್ಲದೆ ಆರೋಪಿಗಳು ಎ.ಟಿ.ಎಂ. ಕಾರ್ಡ್ ಪಡೆದು ಅವರಲ್ಲಿ ಒಬ್ಬರನ್ನು ಎ.ಟಿ.ಎಂ. ಕೇಂದ್ರಕ್ಕೆ ಕರೆದೊಯ್ದು ಪಿನ್ ಪಡೆದು ಹಣವನ್ನು ಡ್ರಾ ಮಾಡಿಸಿದ್ದಾರೆ. ಪ್ರಾಣ ಭಯದಿಂದ ಕಾರು ಬಿಟ್ಟು ದೂರುದಾರು ಅಲ್ಲಿಂದ ತೆರಳುತ್ತಾರೆ. ಇದರಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿ ಕಣ್ಣೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುತ್ತಾರೆ. ಬಳಿಕ ಮರುದಿನ ತಾ. ೮ ರಂದು ಹಲ್ಲೆಗೆ ಒಳಗಾದ ವ್ಯಕ್ತಿ ಅನ್ವರ್ ಅವರು ತಮ್ಮ ೩೭ ಸಾವಿರ ನಗದು ಸೇರಿದಂತೆ ಮೊಬೈಲ್‌ಗಳು ದರೋಡೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಪ್ರಕರಣ ಕೈಗೆತ್ತಿಕೊಂಡು ಪೊಲೀಸರು ತನಿಖೆ ತೀವ್ರಗೊಳಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆ ವೇಳೆಯಲ್ಲಿ ಕೇರಳ ಮೂಲದ ದೂರುದಾರು ಮತ್ತು ಸ್ನೇಹಿತರು ಲೈಂಗಿಕ ಸಂಪರ್ಕಕ್ಕಾಗಿ ಬಂಧಿತ ಮಹಿಳೆ ಬಳಿ ಬಂದಿದ್ದರು. ಆಕೆ ಈ ಸಮಯವನ್ನು ಬಳಸಿಕೊಂಡು ತನ್ನ ಸಹಚರರೊಂದಿಗೆ ಕೃತ್ಯ ನಡೆಸಿರುವುದು ತನಿಖೆಯಿಂದ ಹೊರಬಿದ್ದಿದೆ.
ಬಂಧಿತರಿAದ ಕೃತ್ಯಕ್ಕೆ ಬಳಸಿದ ಎರಡು ಅಟೋ ರಿಕ್ಷಾಗಳು, ೪ ಮೊಬೈಲ್ ಫೋನ್‌ಗಳು ೩೧,೦೦೦ ರೂ ನಗದು ಸೇರಿದಂತೆ ಚಾಕು, ಒಂದು ಎ.ಟಿ.ಎಂ. ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಮೇಲೆ ಕಲಂ ೩೯೫ ಐ.ಪಿ.ಸಿ ದರೋಡೆ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಮಾರ್ಗದರ್ಶನದಲ್ಲಿ ವೀರಾಜಪೇಟೆ ಉಪ ವಿಭಾಗ ಡಿ.ವೈ.ಎಸ್ಪಿ, ನಿರಂಜನ್ ರಾಜೇ ಅರಸ್ ನಿರ್ದೇಶನದ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್ ಶಿವರುಧ್ರ, ವಿರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿಗಳಾದ ಶ್ರೀಧರ್, ಎಂ.ಎ. ಮುತ್ತಣ್ಣ ಮತ್ತು ಸಿಬ್ಬಂದಿಗಳಾದ ಎ.ಎಸ್.ಐ. ನಾಣಯ್ಯ, ರವಿ, ಸತೀಶ್., ಜೋಶ್ ನಿಶಾಂತ್, ಗೀತಾ, ಗಿರೀಶ್, ಮುಸ್ತಾಫ ಧರ್ಮ ಮಲ್ಲಿಕಾರ್ಜುನ, ಮಹಂತೇಶ್, ವಿದ್ಯಾ ಬೆಳವಿ, ಸಿ.ಡಿ.ಆರ್. ಘಟಕದ ರಾಜೇಶ್, ಗಿರೀಶ್, ಮುಂತಾದವರು ಭಾಗವಹಿಸಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ