ನಾಪೋಕ್ಲು, ಅ. ೧೦: ನಾಪೋಕ್ಲು ಗ್ಯಾಲನ್ಸ್ ಶೂರ್ಸ್ ವತಿಯಿಂದ ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ತೆಂಗಿನಕಾಯಿಗೆ ಗುಂಡು ಹಾರಿಸುವ ರಾಜ್ಯ ಮಟ್ಟದ ಸ್ಪರ್ಧೆಯ ಪಾಯಿಂಟ್ ೨೨ ವಿಭಾಗದಲ್ಲಿ ಪುತ್ತರೀರ ನಂಜಪ್ಪ, ಪಾಯಿಂಟ್ ೨೨ ಕ್ಲೇ ಶೂಟಿಂಗ್ನಲ್ಲಿ ಬಡುವಂಡ ದೇವಯ್ಯ, ೧೨ ಬೋರ್ನಲ್ಲಿ ಚೌಂಡೀರ ಸುರ ಮಾಚಯ್ಯ, ಏರ್ ರೈಫಲ್ ವಿಭಾಗದಲ್ಲಿ ಕಬ್ಬಚ್ಚಿರ ಶರತ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಉಳಿದಂತೆ ಪಾಯಿಂಟ್ ೨೨ ವಿಭಾಗದಲ್ಲಿ ಪಟ್ಟಡ ಐರಾ ಬೋಪಣ್ಣ ದ್ವಿತೀಯ ಹಾಗೂ ಚಿಮ್ಮಚ್ಚಿರ ನಾಸಿರ್ ತೃತೀಯ ಸ್ಥಾನ ಪಡೆದರು. ಪಾಯಿಂಟ್ ೨೨ ಕ್ಲೇ ಶೂಟಿಂಗ್ನಲ್ಲಿ ಸಣ್ಣುವಂಡ ವಿನು ದ್ವಿತೀಯ ಹಾಗೂ ಪಟ್ಟಡ ಐರಾ ಬೋಪಣ್ಣ ತೃತೀಯ ಸ್ಥಾನ ಪಡೆದರು. ೧೨ ಬೋರ್ ವಿಭಾಗದಲ್ಲಿ ಕೇಚಿರ ಶಬ್ಧ್ ದ್ವಿತೀಯ ಹಾಗೂ ಚೋನಿರ ರಂಜನ್ ಪೊನ್ನಣ್ಣ ತೃತೀಯ ಸ್ಥಾನ ಪಡೆದರು. ಏರ್ ರೈಫಲ್ ವಿಭಾಗದಲ್ಲಿ ಬಡುವಂಡ ಶ್ಲೋಕ್ ಸುಬ್ಬಯ್ಯ ದ್ವಿತೀಯ, ಬಡುವಂಡ ದೇವಯ್ಯ ತೃತೀಯ ಸ್ಥಾನ ಪಡೆದರು.
ಹಿರಿಯ ಶೂರ್ಸ್ ಪ್ರಶಸ್ತಿಯನ್ನು ಅಪ್ಪಂಡೆರAಡ ಪೆಮ್ಮಯ್ಯ, ಉತ್ತಮ ಮಹಿಳಾ ಶೂರ್ಸ್ ಪ್ರಶಸ್ತಿಯನ್ನು ಪಟ್ಟಡ ಐರಾ ಬೋಪಣ್ಣ ಹಾಗೂ ಉದಯೋನ್ಮುಖ ಶೂರ್ಸ್ ಪ್ರಶಸ್ತಿಯನ್ನು ಬಡುವಂಡ ಶ್ಲೋಕ್ ಸುಬ್ಬಯ್ಯ ಪಡೆದರು.
ಕಾರ್ಯಕ್ರಮವನ್ನು ಪಟ್ಟಣದ ವೈದ್ಯ ಡಾ. ವಲ್ಲಂಡ ಚಂಗಪ್ಪ, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಕೆ. ಸದಾಶಿವ, ಎ.ಎಸ್.ಐ. ಪ್ರಮೋದ್ ಉದ್ಘಾಟಿಸಿದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮರೆನಾಡ್ ಕೊಡವ ಸಮಾಜ ಅಧ್ಯಕ್ಷ ಕುಪ್ಪುಡಿರ ಪೊನ್ನು ಮುತ್ತಪ್ಪ, ಪ್ರಮುಖರಾದ ಪಾಡೆಯಂಡ ಕಾರ್ಯಪ್ಪ, ಬಡುವಂಡ ಮುತ್ತಪ್ಪ, ಅರಂಬೂರು ವಸಂತ್, ಗ್ಯಾಲನ್ಸ್ ಶೂರ್ಸ್ನ ಅಜ್ಜೆಟ್ಟಿರ ಸೋಮಯ್ಯ, ಅಜ್ಜೆಟ್ಟಿರ ಗೌತಮ್ ಮಂದಣ್ಣ, ಕೇಲೇಟಿರ ಪವಿತ್ ಮತ್ತಿತರರು ಇದ್ದರು.