ಮಡಿಕೇರಿ, ಅ. ೧೦: ನಗರದ ಜಲಾಶ್ರಯ ಬಡಾವಣೆಯ ನಿವಾಸಿ ನಗರದಲ್ಲಿ ಕಿಂಡರ್ ಗಾರ್ಟನ್ ಶಾಲೆ ನಡೆಸುತ್ತಿದ್ದ ಪಂದ್ಯAಡ ಗಪ್ಪು ಗಣಪತಿ ಅವರ ಪತ್ನಿ ಆಶಾ (೫೩) ಅವರು ತಾ. ೯ ರಂದು ಮೆದುಳಿನ ರಕ್ತಸ್ರಾವಕ್ಕೊಳಗಾಗಿ ನಿಧನರಾದರು. ಮೃತರ ದೇಹದ ಅಂಗಾAಗಗಳನ್ನು ಮೈಸೂರಿನ ಆಸ್ಪತ್ರೆಯೊಂದಕ್ಕೆ ದಾನವಾಗಿ ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮೃತರು ಪತಿ, ಈರ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. ೧೧ ರಂದು (ಇಂದು) ಅಪರಾಹ್ನ ಮಡಿಕೇರಿಯ ಕೊಡವ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ.