ಪೊನ್ನಂಪೇಟೆ, ಅ. ೮: ಪೊನ್ನಂಪೇಟೆ ನಾಗರೀಕ ವೇದಿಕೆ ವತಿಯಿಂದ ಸ್ವಾತಂತ್ರ‍್ಯದ ಅಮೃತೋತ್ಸವ ಅಮೃತ ಭಾರತಿಗೆ ಕನ್ನಡದ ಆರತಿ - ಪೊನ್ನಂಪೇಟೆಯಲ್ಲಿ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಹುತಾತ್ಮರಾಗಿರುವ ಅಪ್ರತಿಮ ಸ್ವಾತಂತ್ರ‍್ಯ ಹೋರಾಟಗಾರರ ಸ್ಮರಣಾರ್ಥಕ - ಸ್ಮಾರಕ ಭವನ ಹಾಗು ಉದ್ಯಾನವನ (ಪಾರ್ಕ್) ನಿರ್ಮಿಸುವ ಬಗ್ಗೆ ಪೂರ್ವಭಾವಿ ಸಾರ್ವಜನಿಕ ಸಭೆಯನ್ನು ತಾ. ೧೧ರಂದು ನಿಗದಿಯಾಗಿದೆ. ಅಂದು ಬೆಳಿಗ್ಗೆ ೧೧ ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದ ರಿಕ್ರಿಯೇಷನ್ ಕ್ಲಬ್ಲ್ನ ಸಭಾಂಗಣದಲ್ಲಿ ಶಾಸಕ ಕೆ.ಜಿ ಬೋಪಯ್ಯ ಅಧ್ಯಕ್ಷತೆಯಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ ಎಂದು ನಾಗರಿಕ ವೇದಿಕೆ ತಿಳಿಸಿದೆ.