ಮಡಿಕೇರಿ, ಅ. ೮: ಮಡಿಕೇರಿ ತಾಲೂಕು ಹೆರವನಾಡು ಗ್ರಾಮದ ಕವಿತ ಪಿ.ಎಸ್. (೩೦) ಅವರು ತಾ.೧ರಿಂದ ಮನೆಯಿಂದ ಕಾಣೆಯಾಗಿರುವುದಾಗಿ ಪತಿ ವೆಂಕಟೇಶ್ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕವಿತ ಅವರು ಅಂದಾಜು ೫ ಅಡಿ ಎತ್ತರವಿದ್ದು, ಕಾಣೆಯಾದ ದಿನದಂದು ಕೇಸರಿ ಬಣ್ಣದ ಚೂಡಿದಾರ ಧರಿಸಿದ್ದರು. ಕನ್ನಡ, ತುಳು ಭಾಷೆ ಮಾತನಾಡಬಲ್ಲರೆಂದು ದೂರಿನಲ್ಲಿ ಉಲ್ಲೇಖವಾಗಿದೆ. ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ದೂ. ೦೮೨೭೨-೨೨೮೭೭೭ ಅನ್ನು ಸಂಪರ್ಕಿಸಬಹುದು.