ಭಾಗಮಂಡಲ, ಅ. ೬: ತಲಕಾವೇರಿ-ಭಾಗಮಂಡಲ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರು ಭೇಟಿ ನೀಡಿ ಸಿದ್ಧತೆ ಕಾರ್ಯ ಪರಿಶೀಲಿಸಿದರು.
ತಾ.೧೭ ರ ಕಾವೇರಿ ತೀಥೋಧ್ಭವ ಹಿನ್ನೆಲೆ ಸಿದ್ಧತಾ ಕಾರ್ಯ, ಪೂರ್ವಬಾವಿ ಕ್ರಮ, ಭಕ್ತಾದಿಗಳಿಗೆ ಯಾವುದೇ ಕುಂದುಕೊರತೆಯಾಗದAತೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಅವರು ಪರಿಶೀಲಿಸಿದರು. ಇದೇ ಸಂದರ್ಭ ಭಾಗಮಂಡಲ ಮತ್ತು ತಲಕಾವೇರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಮುದ್ದಂಡ ಬಿ. ದೇವಯ್ಯ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಚೆಪ್ಪುಡೀರ ಎಂ. ಪೊನ್ನಪ್ಪ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಮನೆಯಪಂಡ ಕಾಂತಿ ಸತೀಶ್, ಮಲ್ಲಮಾಡ ಪ್ರಭು ಪೂಣಚ್ಚ, ಮಾಳೇಟಿರ ಶ್ರೀನಿವಾಸ್, ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಅಣ್ಣೀರ ಹರೀಶ್ ಮಾದಪ್ಪ, ಶಾಂತೆಯAಡ ನಿರನ್, ಪಾಲೇಂಗಡ ಅಮಿತ್, ಚೋಕಂಡ ಸೂರಜ್ ಸೋಮಯ್ಯ, ಮಂಡೇಡ ಕುಮಾರ್, ಕ್ಷೇತ್ರ ಪಾರುಪಾತ್ಯೆದಾರ ಕೋಡಿ ಮಹೇಶ್, ಕೊಂಡಿರ ಪೊನ್ನಣ್ಣ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಟಪ್ಪ, ಮುಖ್ಯ ಅರ್ಚಕ ಗುರುರಾಜ್, ಆಮೆ ಬಾಲಕೃಷ್ಣ, ಕಾಳನ ರವಿ, ಪಿ.ಎಂ. ರಾಜೀವ್, ವಿನೋದ್ ಕುಮಾರ್, ಮಣವಟ್ಟಿರ ಸುಬ್ರಮಣಿ, ಕಲ್ಮಾಡಂಡ ಸುಬ್ಬಯ್ಯ ಮತ್ತಿತರು ಹಾಜರಿದ್ದರು.