ಮಡಿಕೇರಿ, ಅ. ೬: ವಿಶ್ವವಿಖ್ಯಾತ ಮೈಸೂರು ದಸರಾ ಸ್ತಬ್ಧಚಿತ್ರದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರಸ್ತುತಪಡಿಸಲಾಗಿದ್ದ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಸಿಕ್ಕಿದ್ದು, ಮೈಸೂರು ಜಿಲ್ಲೆಯ ಕೆಎಂಎಫ್ ನಂದಿನಿ ಕ್ಷೀರಧಾರೆಗೆ ದ್ವಿತೀಯ ಬಹುಮಾನ, ಚಿತ್ರದುರ್ಗ ಜಿಲ್ಲೆಯ ಲಿಡ್ಕರ್ ಉತ್ಪನ್ನಗಳ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ದೊರೆತಿದೆ.