ವೀರಾಜಪೇಟೆ, ಅ. ೬: ಐತಿಹಾಸಿಕ ಹಿನ್ನೆಲೆ ಹೊಂದಿರುವ ನಾಡಹಬ್ಬವನ್ನು ಆಚಾರ ವಿಚಾರಗಳಿಗೆ ಧಕ್ಕೆ ಬಾರದಂತೆ ಶ್ರದ್ಧಾಭಕ್ತಿಯಿಂದ ಆಚರಿಸುವಂತಾಗಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ೧೫ ನೇ ವರ್ಷದ ಅದ್ಧೂರಿಯ ಆಯುಧ ಪೂಜೆ ಅಂಗವಾಗಿ ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸ ಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣ ದಿಂದ ಉತ್ಸವಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ ಈ ವರ್ಷ ಯಾವುದೇ ಆತಂಕಗಳಿಲ್ಲದೆ ಹಬ್ಬವನ್ನು ಆಚರಿಸುತ್ತಿದ್ದು, ನವರಾತ್ರಿ ಉತ್ಸವ ತನ್ನದೆ ಆದ ವೈಶಿಷ್ಟತೆ ಹೊಂದಿದೆ. ೯ ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ನಡೆಯುವ ಪೂಜಾ ಕಾರ್ಯಗಳು ಶ್ರೀ ದುರ್ಗಾ ದೇವಿ ಲೋಕ ಕಲ್ಯಾಣಕ್ಕಾಗಿ ಅವತಾರವೆತ್ತಿ ದುಷ್ಟಶಕ್ತಿಗಳನ್ನು ಸಂಹಾರ ಮಾಡಲೆಂದು ಜಗನ್ಮಾತೆ ಅವತಾರ ಎತ್ತಬೇಕಾಯಿತು. ಚಾಮುಂಡೇಶ್ವರಿ ದೇವಿ ಐಶ್ವರ್ಯ ಆರೋಗ್ಯ ನೀಡುವು ದರೊಂದಿಗೆ ಎಲ್ಲರಿಗೂ ಒಳ್ಳೆಯದನ್ನು ಉಂಟುಮಾಡಲಿ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ ಆಯುಧ ಪೂಜೆ ನಾಡಹಬ್ಬ ದಸರಾ ಹಿಂದೂ ಸಂಸ್ಕೃತಿಯ ಹಬ್ಬವಾಗಿದ್ದು ಕೊಡಗಿನ ಎಲ್ಲಾ ಕಡೆಗಳಲ್ಲಿ ಆಚರಿಸಿಕೊಂಡು ಬರುತ್ತಿದ್ದು ದೇವರು ಎಲ್ಲರಿಗೂ ಸುಖಶಾಂತಿ ನೆಮ್ಮದಿ ನೀಡುವಂತಾಗಲಿ ಎಂದರು. ಬಿಜೆಪಿಯ ತೇಲಪಂಡ ಶಿವಕುಮಾರ್ ಮಾತನಾಡಿ ಕೊಡಗಿನಲ್ಲಿ ಹೆಚ್ಚು ಜನರು ಖಾಸಗಿ ಬಸ್ಸುಗಳನ್ನೆ ನಂಬಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಖಾಸಗಿ ಬಸ್ ಕಡಿಮೆಯಾಗಿದ್ದು ಕೆಲಸಗಳಿಲ್ಲದೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಬಸ್ ಕಾರ್ಮಿಕರಿಗೆ ಸಹಕಾರ ನೀಡುವಂತಾಗಬೇಕು ಎಂದರು.

ಕೊಡಗು ಖಾಸಗಿ ಬಸ್ ಕಾರ್ಮಿಕ ಸಂಘದ ಅಧ್ಯಕ್ಷ ಕುಂಬೆಯAಡ ಸುರೇಶ್ ದೇವಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಸೈನಿಕರಾದ ಪಟ್ಟಚೇರಿರ ಪೂಣಚ್ಚ, ಚೆಂಬೆಬೆಳ್ಳೂರು ಗ್ರಾ.ಪಂ. ಸದಸ್ಯ ವಿ.ಪಿ.ಡಾಲು, ವಿನಾಯಕ ಟರ‍್ಸ್ನ ಬಿ.ವಿ.ಹೇಮಂತ್, ಉದ್ಯಮಿ ವಿ.ಎನ್. ದಿನೇಶ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಜೂಡಿವಾಜ್ ವಾರ್ಷಿಕ ವರದಿ ಮಂಡಿಸಿದರೆ, ಮಾಜಿ ಅಧ್ಯಕ್ಷ ದಿನೇಶ್ ನಾಯರ್ ಸ್ವಾಗತಿಸಿ ವಂದಿಸಿದರು.

ಸAಘದ ಹಿರಿಯ ಕಾರ್ಮಿಕರಿಗೆ ಮತ್ತು ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಡಿಗ್ರಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಾಟ್ಯಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ತಂಡ ದುರ್ಗಾದೇವಿಯ ನೃತ್ಯ, ಅಮ್ಮತ್ತಿ ರಾಜೇಶ್ ಅವರಿಂದ ಮ್ಯಾಜಿಕ್ ಶೋ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮಗಳು ನಡೆಯಿತು. ಪೂರ್ವಾಹ್ನ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು.